ಸುದ್ದಿಮೂಲ ವಾರ್ತೆ
ತಿಪಟೂರು, ಜು 21 : ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಕುಸಿದು ಬಿದ್ದು, ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ಆಸ್ವತ್ರೆಗೆ ದಾಖಾಲಿಸುವ ಮೂಲಕ ಬಸ್ ಚಾಲಕ ಹಾಗೂ ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಭದ್ರಾವತಿ ಘಟಕದ ಬಸ್ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಂಧರ್ಭದಲ್ಲಿ ಬೆಂಗಳೂರಿಗೆ
ಪ್ರಯಾಣಿಸುತ್ತಿದ್ದ ಈಶ್ವರ್ರೆಡ್ಡಿಯವರಿಗೆ ಬಸ್ನಲ್ಲಿ ಉಸಿರಾಡಲು ಸಾಧ್ಯವಾಗದೇ ಬಸ್ನಲ್ಲಿಯೇ ಕುಸಿದುಬಿದ್ದರು. ಬಳಿಕ ಮೂರ್ಛೆ ಬಂದು ನಾಲಿಗೆಯಲ್ಲಿ ನೊರೆ ಹಾಗೂ ರಕ್ತ ಬರುತ್ತಿರುವುದನ್ನು ಗಮನಿಸಿದ ನಿರ್ವಾಹಕ ಓಂಕಾರ್ ತಕ್ಷಣ ಚಾಲಕ ಪ್ರಕಾಶ್ಗೆ ಮಾಹಿತಿ ತಿಳಿಸಿ ಬಸ್ನಲ್ಲಿಯೇ ತುರ್ತು ವಾಹನದ ರೀತಿಯಲ್ಲಿ ತಿಪಟೂರಿನ ಸಾರ್ವಜನಿಕ ಆಸ್ವತ್ರೆಗೆ ಕರೆದು ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಪ್ರತಿಯೊಬ್ಬರ ಜೀವನವೂ ಇಂದು ಕಷ್ಟಕರವಾಗಿದೆ. ವಾನು ಒಬ್ಬರಿಗೆ ಸಹಾಯ ಮಾಡುವುದು ಕರ್ತವ್ಯ. ಇದರಿಂದ ಒಬ್ಬರ ಜೀವ ಉಳಿದಂತಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕಿದೆ ಎಂದರು ಚಾಲಕ ಓಂಕಾರ್ ಹಾಗೂ ನಿರ್ವಾಹಕ ಪ್ರಕಾಶ್.
ತುರ್ತು ಸಂದರ್ಭದಲ್ಲಿ ನನ್ನನ್ನು ಬಸ್ನಲ್ಲಿಯೇ ಕರೆದು ತಂದು ಸಾರ್ವಜನಿಕ ಆಸ್ವತ್ರೆಗೆ ದಾಖಾಲು ಮಾಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಸಾರ್ವಜನಿಕ ಆಸ್ವತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದು ಚಿಕಿತ್ಸೆ ಪಡೆದ ಪ್ರಯಾಣಿಕ ಈಶ್ವರ್ ರೆಡ್ಡಿ ಹೇಳಿದರು.