ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 21 : ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾ.ಪಂ ಆವರಣದಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಲೈಬ್ರರಿ ಮಾಡಿರುವುದು ಅತ್ಯುತ್ತಮವಾದ ಕೆಲಸವಾಗಿದೆ. ಮಕ್ಕಳಿಗೆ ಒಳ್ಳೆಯ ವ್ಯಾಸಂಗ ಮಾಡಿಕೊಳ್ಳಲು ಸಾಕಷ್ಟು ರೀತಿಯಲ್ಲಿ ಅವಕಾಶವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯದ ನಂತರದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳಲು ಗ್ರಂಥಾಲಯದ ಪಾತ್ರ ಹಿರಿಯದ್ದಾಗಿದೆ ಎಂದು ಎಂದರು.
ಇದೇ ಸಂದರ್ಭದಲ್ಲಿ ಕನ್ನಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಗ್ರಾಪಂ ಸರ್ವ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಚಿವ ಕೆ.ಎಚ್.ಮುನಿಯಪ್ಪ ಅವರಿಂದ ಸಾಂಕೇತಿಕವಾಗಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ2000 ರೂ.ಗಳ ಅರ್ಜಿಯ ಹಕ್ಕುಪತ್ರವನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾಜಿ ಸಂಸದ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಿ.ಜಗನ್ನಾಥ್, ಬಿ.ರಾಜಣ್ಣ, ಲಕ್ಷ್ಮಣ್ಗೌಡ, ಗೋಪಾಲಕೃಷ್ಣ, ಎಸ್.ಆರ್.ರವಿಕುಮಾರ್, ಮುನೇಗೌಡ, ಡಿ.ಎಂ.ದೇವರಾಜ್, ರಾಮಚಂದ್ರಪ್ಪ, ಎಸ್.ಪಿ.ಮುನಿರಾಜ್, ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿ, ಸದಸ್ಯರಾದ ಮಹೇಶ್ಕುಮಾರ್, ಆನಂದ್.ಸಿ.ಎಂ, ಕನ್ನಮಂಗಲ ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಸ್.ಜಿ.ಮಂಜುನಾಥ್, ಎಸ್.ಜಿ.ವೆಂಕಟಸ್ವಾಮಿ, ನರಸಿಂಹಮೂರ್ತಿ, ನಂದಿನಿ ತ್ಯಾಗರಾಜ್, ರಶ್ಮಿ ಮುನಿರಂಗಪ್ಪ, ವನಜಾಕ್ಷಮ್ಮ, ನಿವಿತ ಮಂಜುನಾಥ್, ಆಶಾ, ಶಾಲಿನಿ, ಅಂಬರೀಶ್, ಗೌರಮ್ಮ, ಪವಿತ್ರ, ವೆಂಕಟೇಶ್ವರ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.