ಸುದ್ದಿಮೂಲ ವಾರ್ತೆ
ಮಾಲೂರು, ಜು 21 : ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಅಧ್ಯಕ್ಷರಾಗಿ ಮಂಜುನಾಥ್. ಕೆ ಮತ್ತು ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ ಎ. ವಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಶಿವಲಿಂಗಪ್ಪ ಘೋಷಿಸಿದ್ದಾರೆ.
ಚುನಾವಣೆ ಫಲಿತಾಂಶದ ನಂತರ ಮಾತನಾಡಿ, ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆ ಯಲ್ಲಿ 12 ಮಂದಿ ನಿರ್ದೇಶಕರು ಚುನಾಯಿತರಾಗಿದ್ದು, ಮುಂದಿನ ಐದು ವರ್ಷ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ದಿನಾoಕ ನಿಗದಿಯಂತೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕ ರಾದ ಅರುಣ್ ಕುಮಾರ ಎ.ಜಿ ಮತ್ತು ಮಂಜುನಾಥ್ ಕೆ, ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ಗೌಡ ಎ.ವಿ ಮತ್ತು ಅನಂತ ರಾಮಯ್ಯ ಎ.ಜಿ. ರವರು ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಯಲ್ಲಿ ಮಂಜುನಾಥ್. ಕೆ 7ಮತ ಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರೆ, ಅರುಣ್ ಕುಮಾರ್ ಎ ಜಿ ರವರು 5 ಮತಗಳನ್ನುಗಳಿಸಿ 2 ಮತಗಳ ಅಂತರದಲ್ಲಿ ಪರಾಭವ ಗೊಂಡರು, ಉಪಾಧ್ಯಕ್ಷ ಸ್ಥಾನದ ಅoತರಾಮಯ್ಯ ಎ ಜಿ ಹಾಗೂ ವಿಶ್ವನಾಥ ಗೌಡ ಎ.ವಿ ಇಬ್ಬರೂ ಅಭ್ಯರ್ಥಿಗಳು ತಲಾ ಆರು -ಆರು ಸಮ ಮತಗಳು ಪಡೆದ ಕಾರಣ ಎಲ್ಲಾ ನಿರ್ದೇಶಕರ ಒಪ್ಪಿಗೆ ಯಂತೆ ಲಾಟರಿ ಮಾಡಿದಾಗ ವಿಶ್ವನಾಥ ಗೌಡ ಎ.ವಿ ಅವರುಲಾಟರಿ ಮೂಲಕ ಉಪಾಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಆಡಳಿತ ಅವಧಿಗೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯ ನಿರ್ವಹಕ ಶ್ರೀನಿವಾಸ್, ನಿರ್ದೇಶಕರಾದ ಅರುಣ್ ಕುಮಾರ್, ರಾಜೇಶ್, ಮುನೇಗೌಡ, ಅಂನತರಾಮಯ್ಯ, ಉಮೇಶ್, ವೆಂಕಟೇಶಪ್ಪ ಜಗನಾಥ್, ಮುನಿವೀರಮ್ಮ, ಪದ್ಮಮ್ಮ ಸೌಭಾಗ್ಯಮ್ಮ, ಸದ್ಯಸರಾದ ನಾರಾಯಣಸ್ವಾಮಿ ಮುಖಂಡರಾದ ಅಂಬರೀಷ್ ರಾಮಚಂದ್ರಪ್ಪ, ವೆಂಕಟಾಚಲ, ಕೆಂಪಣ್ಣ, ಚಂದ್ರಪ್ಪ, ಟಿ.ಕೆ ಕೃಷ್ಣಪ್ಪ, ಭಕ್ತಪ್ಪ, ಶೇಖರ್ ಇತರರು ಉಪಸ್ಥಿತರಿದ್ದರು.