ಸುದ್ದಿಮೂಲವಾರ್ತೆ
ಕೊಪ್ಪಳ ಜು 24:ರಾಜ್ಯದಲ್ಲಿ ಗೃಹಜ್ಯೋತಿ. ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ಹಿನ್ನೆಲೆ. ಕೊಪ್ಪಳದ ಆಧಾರ್ ಕೇಂದ್ರದಲ್ಲಿ ಜನಜಂಗುಳಿ ಕಂಡು ಬಂತು.
ಕೊಪ್ಪಳದ ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಸ್ಥಳ ಬದಲಾವಣೆ ಜನರು ಆಗಮಿಸುತ್ತಿದ್ದಾರೆ.ಗ್ರಾಮೀಣ ಭಾಗದಲ್ಲಿ ಆಧಾರ್ ಕೇಂದ್ರಗಳು ಇಲ್ಲದ ಹಿನ್ನೆಲೆ.ಕೊಪ್ಪಳಕ್ಕೆ ಆಗಮಿಸಬೇಕಾದ ಅನಿವಾರ್ಯತೆ ಇದೆ.ಜಿಲ್ಲೆಯ ವಿವಿಧ ಗ್ರಾಮ ತಾಲೂಕುಗಳಿಂದಲೂ ಕೂಡ ಜನ ಆಗಮಿಸುತ್ತಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದಲೇ ಜನರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ.ಹಿರಿಯ ನಾಗರಿಕರು, ಅಂಗವಿಕಲರಿಗೆ ಪ್ರತ್ಯೇಕ ಆಧಾರ್ ಕೇಂದ್ರ ಸ್ಥಾಪಿಸಲು ಈ ಸಂದರ್ಭದಲ್ಲಿ ಆಗ್ರಹಿಸುತ್ತಿದ್ದಾರೆ. ಆಧಾರ ತಿದ್ದುಪಡಿ. ಬ್ಯಾಂಕುಗಳಿಗೆ ಆಧಾರ ಲಿಂಕ್ ಸೇರಿ ವಿವಿಧ ಕೆಲಸಕ್ಕಾಗಿ ಆಗಮಿಸುತ್ತಿದ್ದಾರೆ.
ಕೊಪ್ಪಳ ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ದಿನಕ್ಕೆ ಎರಡು 250ರಿಂದ 300 ಆಧಾರ್ ಬದಲಾವಣೆ ಮಾಡುತ್ತಿದ್ದಾರೆ. ಇಂದು ಸೋಮುವಾರವಾದ ಹಿನ್ನಲೆಯಲ್ಲಿ ಸಾವಿರಾರು ಜನರು ಆಗಮಿಸಿದ್ದರು.