ಸುದ್ದಿಮೂಲವಾರ್ತೆ
ಕೊಪ್ಪಳ,ಜು.25: ಕೊಪ್ಪಳ ನಗರ ಸೇರಿ ಜಿಲ್ಲೆಯಾದ್ಯಂತ ಜಟಿಜಿಟಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ
ಕಳೆ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆಗಾಗ ಜೋರು ಹಾಗು ಜಟಿಜಿಟಿ ಮಳೆಯಿಂದಾಗಿ ಕೊಪ್ಪಳವು ಮಲೆನಾಡಿನಂತಾಗಿದೆ. ವಾತರವರಣದಲ್ಲಿ ತಂಪು ಆವರಿಸಿದೆ. ಬಿಸಿಲು ಅಪರೂಪವಾಗಿದೆ. ಬಿಸಿಲು ನಾಡಿನ ಜನ ಈ ವಾತವರಣಕ್ಕೆ ಹೊಂದಿಕೊಳ್ಳಲು ಹೆಣಗಾಡುವಂತಾಗಿದೆ.
ಮಂಗಳವಾರ ಬೆಳಗಿನ ಜಾವದಿಂದಲೇ ಮಳೆ ಜಟಿಜಿಟಿ ಮಳೆಯಾಗುತ್ತಿದೆ. ಮುಂಜಾನೆ ಕೆಲಸಕ್ಕೆ ಹೋಗುವವರಿಗೆ ಮಳೆ ಅಡ್ಡಿಯಾಗಿದೆ. ಜಿಟಿಜಿಟಿ ಮಳೆಯಿಂದ ಹೊರಗೆ ಹೋಗಲು ಆಗದೆ ಪರದಾಡುವಂತಾಗಿದೆ.
ಕಳೆದ ಒಂದು ವಾರದಿಂದ ಜಿಟಿಜಟಿ ಮಳೆಗೆ ರಸ್ತೆಗಳೆಲ್ಲ ಕೆಸರುಗದ್ದೆಗಳಾಗಿವೆ. ಕೆಲವು ರಸ್ತೆಗಳಲ್ಲಿ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ರೀತಿ ಮಳೆ ಮುಂದುವರಿದರೆ ಬೆಳೆಯು ಸಹ ಹಾಳಾಗಲಿದೆ.
ಜೂನ ತಿಂಗಳಲ್ಲಿ ಮಳೆಯಾಗದೆ ಬರದ ಛಾಯೆ ಆವರಿಸಿದ್ದ ಕೊಪ್ಪಳ ಜಿಲ್ಲೆಯಲ್ಲಿ ಈಗ ವ್ಯಾಪಕ ಮಳೆಯಾಗುತ್ತಿದೆ. ಆದರೂ ಜನವರಿಯಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಶೇ 11 ರಷ್ಟು ಮಳೆ ಕೊರತೆ ಇದೆ.
ಜನವರಿಯಿಂದ ಇಲ್ಲಿಯವರೆಗೂ 207 ಎಂಎಂ ಮಳೆಯಾಗಬೇಕಿತ್ತು
ಆದರೆ ಆಗಿದ್ದು 184.1 ಎಂ ಎಂ ಮಳೆಯಾಗಿದೆ. ಜೂನ ತಿಂಗಳಲ್ಲಿ 76 ಎಂಎಂ ಮಳೆಗೆ 40 ಎಂಎಂ ಮಳೆಯಾಗಿ ಶೇ 49 ರಷ್ಟು ಕೊರತೆಯಾಗಿದೆ. ಜುಲೈ ತಿಂಗಳಲ್ಲಿ 47 ಎಂ ಎಂ ಮಳೆಯಾಗಬೇಕಿತ್ತು ಆಗಿದ್ದು 78 ಎಂಎಂ ಮಳೆ ಇದರಿಂದ ಶೇ 65 ರಷ್ಟು ಹೆಚ್ಚಳವಾಗಿತ್ತು ಜೂನ ಜುಲೈ ತಿಂಗಳು ಮುಂಗಾರು ಹಂಗಾಮಿನಲ್ಲಿ 126 ಎಂಎಂ ಮಳೆಯಾಗಬೇಕಿತ್ತು. ಆಗಿದ್ದು 117 ಎಂಎಂ ಮಳೆಯಾಗಿ ಶೇ 7ರಷ್ಟು ಕೊರತೆಯಾಗಿದೆ. ಈಗ ಮಳೆಯಾದರೂ ರೈತರಿಗೆ ಲಾಭಕ್ಕಿಂತ ನಷ್ಟ ಉಂಟು ಮಾಡುತ್ತಿದೆ.