ಸುದ್ದಿಮೂಲವಾರ್ತೆ
ಕೊಪ್ಪಳ ಜು 26: ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜನಸಂಘದಲ್ಲಿ ಯಾವುದೇ ಲಿಂಗಾಯತ್ ನಾಯಕರಿದ್ದಿಲ್ಲ ಆ ಕಾಲದಲ್ಲಿ ನಾವು ಸಂಘದಲ್ಲಿ ಇದ್ದೇವೆ. ಇದಕ್ಕೆ ನಾವು ಸಹ ಬೇಕಾಗುವಷ್ಟು ಕೆಲಸ ಮಾಡಿ ಹಿಂತಿರುಗಿಸಿದ್ದೇವೆ ಎಂದರು.
ಈಗ ಮತ್ತೆ ಬಿಜೆಪಿಗೆ ಹೋಗುವುದಿಲ್ಲ. ಅಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈಗ ಯಾವ ಪಕ್ಷ ತತ್ವ ಸಿದ್ದಾಂತ ಉಳಿದುಕೊಂಡಿದೆ. ಜನಸಂಘದ ತತ್ವ ಸಿದ್ದಾಂತ ಈಗಿನ ಬಿಜೆಪಿಯಲ್ಲಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಯತ್ನ ಮಾಡುತ್ತೇನೆ.ನನನ್ನು ಬಿಜೆಪಿ ಯಾವ ರೀತಿ ನಡೆಕೊಂಡರು. ಅಮಾವನಕರ ನಡೆಕೊಂಡರು. ಬಿಜೆಪಿ ಗೌರವ ನೀಡಿಲ್ಲ. ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ನಡೆಸಿಕೊಳ್ಳುತ್ತಿದೆ. ಹಠಕ್ಕೆ ಬಿದ್ದು ಸೋಲಿಸಲು ಹೋಗಿ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದರು.
ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದಷ್ಟು ಶೋಚನಿಯ ಸ್ಥಿತಿಗೆ ಬಂದಿದೆ. ರಾಜ್ಯಾಧ್ಯಕ್ಷರ ಆಯ್ಕೆ ಮಾಡದಷ್ಟು ಅರಾಜಕತೆ ಉಂಟಾಗಿದೆ. ನಮ್ಮಂಥ ಹಿರಿಯರ ಹೊರಗೆ ಕಳುಹಿಸಿದ ನಂತರ ಏನಾಗಿದೆ ಎಂಬುವುದು ಗೊತ್ತಾಗುತ್ತದೆ.ಲೋಕಸಭೆಗೆ ಸ್ಪರ್ಧಿಸುವ ಕುರಿತು ಚರ್ಚೆಯಾಗಿಲ್ಲ. ಕಾಂಗ್ರೆಸ್ ಪರವಾಗಿ ಅಲೆ ಇದೆ. ಮುಂದಿನ ಲೋಕಸಭಾ ಚುನಾವಣೆ 15 ರಿಂದ 20 ಸ್ಥಾನ ಗೆಲ್ಲಲಿದೆ ಎಂದರು.
ಹಿರಿಯ ಶಾಸಕರು ಸಿಎಂ ಪತ್ರ ಬರೆದ ಹಿನ್ನೆಲೆ ಸಿಎಲ್ ಪಿ ಸಭೆಯಲ್ಲಿ ಎಲ್ಲಾ ನಿರ್ಧಾರವಾಗುತ್ತದೆ. ಅಲ್ಲಿ ಎಲ್ಲಾ ಚರ್ಚೆಯಾಗಿದೆ. ಬಿ ಆರ್ ಪಾಟೀಲ ಎನ್ನಲಾಗುವ ಪತ್ರ ಫೇಕ್ ಎಂದು ತಿಳಿಸಿದ್ದಾರೆ ಎಂದರು.
ಮಣಿಪುರ ಗಲಾಟೆ ನಿಯಂತ್ರಿಸಲು ಅಲ್ಲಿಯ ಸರಕಾರ ವಿಫಲವಾಗಿದೆ. ಬಿಜೆಪಿಯವರು ಸರಕಾರದ ಮುಖ್ಯಮಂತ್ರಿ ರಾಜಿನಾಮೆ ಪಡೆಯಬೇಕು. ಅಲ್ಲಿಯ ಸರಕಾರ ಶಾಂತಿ ಕಾಪಾಡಲು ವಿಫಲವಾಗಿದೆ ಎಂದರು.
ಡಿಜೆ ಹಳ್ಳಿ ಹಾಗು ಕೆಜೆ ಹಳ್ಳಿ ಗಲಭೆಯಲ್ಲಿ ಅಮಾಯಕರ ಮೇಲಿನ ಪ್ರಕರಣ ಹಿಂಪಡೆಯಲು ಶಾಸಕ ತನ್ವೀರ ಶೆಟ್ ಪತ್ರ ಕುರಿತು ಪ್ರತಿಕ್ರಿಯಿಸಿ ಇದಕ್ಕೆ ಗೃಹ ಇಲಾಖೆ ಇದೆ. ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜಶೇಖರ ಹಿಟ್ನಾಳ, ಅಂದಪ್ಪ ಜವಳಿ, ಶಿವಕುಮಾರ, ಗುರುರಾಜ ಹಲಗೇರಿ ಇದ್ದರು.