ಸುದ್ದಿಮೂಲವಾರ್ತೆ
ಕೊಪ್ಪಳ ಜು 26: ಕೊಪ್ಪಳದ ಎಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳು ಸೇರಿ ಇಂದು ಮಣಿಪುರ ಘಟನೆ ಖಂಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿ ಮುಜುಮದಾ ನೇತೃತ್ವ ವಹಿಸಿಕೊಂಡಿದ್ದರು. ಪ್ರತಿಭಟನೆಯಲ್ಲಿ ಸಹಜಾ ಟ್ರಸ್ಟ್ ನ ಶೀಲಾ ಹಾಲ್ಕುರಿಕೆ, ಧ್ವನಿ ಸ್ವಯಂ ಸೇವಾ ಸಂಸ್ಥೆ ಯ ಶಂಕರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಹಂಚಾಟೆ,ಕದಳಿ ವೇದಿಕೆ ಯ ಅಧ್ಯಕ್ಷರಾದ ನಿರ್ಮಲಾ ಬಳ್ಳೊಳ್ಳಿ, ಜ್ಯೋತಿ ಹಿಟ್ನಾಳ, ಜ್ಯೋತಿ ಗೊಂಡಬಾಳ, ಸೌಭಾಗ್ಯ,ಸುಮಂಗಲಾ ಹಂಚಿನಾಳ,ಸವಿತಾ ಸವಡಿ,ಸುಧಾ ಶೆಟ್ಟರ್,ಸರೋಜಾ ಬಾಕಳೆ, ಶಿಲ್ಪಾ ಸಸಿಮಠ,ಶೋಭಾ ಪಲ್ಲೇದ,ಸಲಿಮಾ ಜಾನ್,ಹುಸೇನಬಿ ಭಕ್ಷಿ, ಗವಿಸಿದ್ಧಪ್ಪ ಹಲಗಿ, ವಿಸ್ತಾರ ಸಂಸ್ಥೆಯ ಜಾಸ್ಮಿನ್,
ಅನ್ವರ ಭಾಷಾ, ಸೌಭಾಗ್ಯ ಕದ್ರಳ್ಳಿ,ಗೌರಿ, ಮೆಹಮೂದಾ ಕುದರಿಮೋತಿ, ನಸ್ರೀನ್ ಗೋಡೆಕಾರ ಇತರರು ಇದ್ದರು.