ಸುದ್ದಿಮೂಲ ವಾರ್ತೆ
ಜು.26:ಭಾರತ್ ಜೋಡೋ ಘೋಷಣೆಯ ನಂತರ ಬೂತ್ ಜೋಡೊ ಕಾರ್ಯ ಆಗಬೇಕಿದೆ. ಬೂತ್ ಗೆದ್ದರೆ ಭಾರತವನ್ನು ಗೆದ್ದಂತೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು.
ಇದೇ ಅರಮನೆ ಮೈದಾನದಲ್ಲಿ ರಾಜೀವ್ ಗಾಂಧಿ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆಗ ಕೆ.ಜೆ.ಜಾರ್ಜ್ ಯೂತ್ ಕಾಂಗ್ರೆಸ್ ಅಧ್ಯಕ್ಷರು, ನಾನು ಕಾರ್ಯದರ್ಶಿಯಾಗಿದ್ದೆ, ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದರು.
ಕರ್ನಾಟಕ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ರಾಜ್ಯ. 1999 ರಲ್ಲಿ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿದ್ದು ಇದೇ ಕನ್ನಡಿಗರು.
ರಾಹುಲ್ ಗಾಂಧಿ ಅವರು 23 ದಿನ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದರು. ಸೋನಿಯಾಗಾಂಧಿ ಅವರು ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಕರ್ನಾಟಕದ ನೆಲ ಕಾಂಗ್ರೆಸ್ ಪಕ್ಷಕ್ಕೆ ನೂರಾರು ನಾಯಕರನ್ನು ಕೊಡುಗೆಯಾಗಿ ನೀಡಿದೆ.
ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ದೇಶವನ್ನು ದಿವಾಳಿ ಮಾಡುತ್ತಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಡುಗೆಯನ್ನು ಮರೆಯುವಂತಿಲ್ಲ. ಸಾಕಷ್ಟು ಶ್ರಮವಹಿಸಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಜೊತೆಗೆ ಯಾವುದೇ ಅಪೇಕ್ಷೆ ಇಲ್ಲದೆ, ಪಕ್ಷಕ್ಕೆ ಯಾವುದೇ ಹೊರೆ ಹಾಕದೆ ಪಕ್ಷದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಇಡೀ ದೇಶದ ಕಣ್ಣು ಕರ್ನಾಟಕದ ಮೇಲಿದೆ. ಪಿತೂರಿ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಇಳಿಸಲಾಗಿದೆ.
ಪ್ರಸ್ತುತ ಬಹುದೊಡ್ಡ ಜವಾಬ್ದಾರಿ ನಮ್ಮ- ನಿಮ್ಮ ಮೇಲಿದೆ. 2024 ರ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಅದಕ್ಕೆ ಈಗಿನಿಂದಲೇ ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಿ. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಪ್ರತಿ ಬೂತ್ ಅನ್ನು ಡಿಜಿಟಲ್ ಮಾಡಿ, ಸಂಘಟನೆ ಮಾಡಿ. ಆಗ ಹೊಸ ಭಾರತ ನಿರ್ಮಿಸಲು ಯುವ ಕಾಂಗ್ರೆಸ್ಸಿಗರಿಗೆ ಸಾಧ್ಯ.
ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ “ಇಂಡಿಯಾ” ಒಗ್ಗಟ್ಟಾಗಿದೆ.
ಈ “ಇಂಡಿಯಾ” ಭಾರತವನ್ನು ರಕ್ಷಿಸುತ್ತದೆ, ನಾವು ಇಂಡಿಯಾವನ್ನು ರಕ್ಷಿಸುತ್ತೇವೆ, ಎಲ್ಲಾ ಆತಂಕಗಳಿಂದ ಹೊರಗೆ ತರುತ್ತೇವೆ ಎನ್ನುವ ವಿಶ್ವಾಸವಿದೆ.
ಕೇವಲ ಶಾಸಕ, ಸಂಸದ ಆಗಬೇಕು ಎನ್ನುವ ಮನೋಭಾವನೆ ಇಟ್ಟುಕೊಂಡು ಕೆಲಸ ಮಾಡಬೇಡಿ. ನೀವು ಪ್ರಮಾಣಿಕವಾಗಿ ಕೆಲಸ ಮಾಡಿದರೆ ಅಧಿಕಾರ ನಿಮ್ಮ ಬಳಿಗೆ ಬರುತ್ತದೆ.
ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ತಂದರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯತ್ ಇಂದ ಹೊಸ ಮುಖಗಳು ರಾಜಕೀಯಕ್ಕೆ ಬಂದವು.
ನೆಹರು ಅವರು ಅಲಹಬಾದ್ ಮುನ್ಸಿಪಲ್ ಕಾರ್ಪೋರೇಷನ್ನ ಅಧ್ಯಕ್ಷರಾಗಿದ್ದರು. ರಾಜ್ಗೋಪಾಲ್ಚಾರಿ ಮಧುರೈ ಮುನಿಸಿಪಲ್ ಅಧ್ಯಕ್ಷರಾಗಿದ್ದರು. ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿ ಅವರು ಪಂಚಾಯಿತಿ ಅಧ್ಯಕ್ಷರಾಗಿದ್ದರು. ವಿಲಾಸ್ರಾವ್ ದೇಶ್ಮುಖ್ ಜಿಲ್ಲಾಪಂಚಾಯಿತಿ ಸದಸ್ಯ, ಸರ್ಪಂಚ್ ನಂತರ ಮಹಾರಾಷ್ಟ್ರದ ಸಿಎಂ ಆಗಿ 7 ವರ್ಷ ಸೇವೆ ಸಲ್ಲಿಸಿದರು.
ನಾಯಕರುಗಳ ಹಿಂದೆ ಹೋಗಬೇಡಿ, ನಿಮ್ಮ ಕೆಲಸ ನೋಡಿ ನಾಯಕರುಗಳೇ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಕೆಲಸವನ್ನು ರಾಜೀವ್ ಗಾಂಧಿ ಮಾಡಿದರು.
ಮಣಿಪುರದಿಂದ, ಈಶಾನ್ಯ ಭಾರತದ ಅನೇಕ ಗೆಳೆಯರು ಬಂದಿದ್ದೀರಿ. ಮಣಿಪುರ ಹೊತ್ತಿ ಉರಿಯುತ್ತಿದೆ. ನೀವು ಭಾರತವನ್ನು ಜೋಡಿಸುವ ಹೊಸ ಕೆಲಸಕ್ಕೆ ಕೈ ಜೋಡಿಸಲು ಇಲ್ಲಿಗೆ ಬಂದಿದ್ದೀರಿ ನಿಮಗೆ ವಂದನೆಗಳು.
ಗಾಂಧಿ ಕುಟುಂಬ ಅಧಿಕಾರದ ಹಿಂದೆ ಬಿದ್ದಿಲ್ಲ. ಸೋನಿಯಾ ಗಾಂಧಿ ಅವರು ಅವಕಾಶವಿದ್ದರು 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರು. ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಬೇಡ ಎಂದು ಹೇಳಿದ್ದರು.
ನಿಸ್ವಾರ್ಥ ನಾಯಕರ ಪಕ್ಷ ಕಾಂಗ್ರೆಸ್. ನಾವೆಲ್ಲ ಸೇರಿ “ಇಂಡಿಯಾ” ಬಲಪಡಿಸೋಣ.