ಜು.27:2023-24 ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದು,ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳಿಗೆ ಸಮಾನ ರೀತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದು ಕಳೆದ ಸರ್ಕಾರದ ಅವಧಿಯಲ್ಲಿ ಕುಂಟಿತವಾದ ಕಾಮಗಾರಿಗಳನ್ನು ಹಾಗೂ ಅರೋಗ್ಯ ಇಲಾಖೆ, ಶಿಕ್ಷಣ, ಇಲಾಖೆ, ಎಸ್. ಸಿ & ಎಸ್. ಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದರು
ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 318 ರ ಸಭಾಂಗಣದಲ್ಲಿ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಾಕ ಸಚಿವರಾದ ಡಿ. ಸುಧಾಕರ್ ರವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಬಳ್ಳಾರಿ, ಬೀದರ್ ಕಲಬುರಗಿ ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖ್ಯ ಅಧಿಕಾರಿಗಳೊಂದಿಗೆ ಪ್ರಸಕ್ತ ಸಾಲಿನಲ್ಲಿ ಕೆ. ಕೆ.ಆರ್. ಡಿ.ಬಿ ವತಿಯಿಂದ ಕೈಗೊಳ್ಳಬಹುದಾದ ಕಾಮಗಾರಿ ಬಗ್ಗೆ ಹಾಗೂ ಕಳೆದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಂಕಿ ಅಂಶಗಳು ಮಾಹಿತಿಯನ್ನು ಪಡೆಯಲಾಯಿತು
ವಿಶೇಷವಾಗಿ ಸಭೆಯಲ್ಲಿ ಮಾತನಾಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೀಡಾ ಇಲಾಖೆಯ ವತಿಯಿಂದ ಕಲಬುರಗಿ, ಬಳ್ಳಾರಿ ಯಲ್ಲಿ (ಸ್ಪೋರ್ಟ್ಸ್ ಎಕ್ಸ್ ಲೆನ್ಸ್ ಸೆಂಟರ್) ಮಾಡಿ ರಾಜ್ಯದ ನಾಲ್ಕು ಭಾಗಗಳಾಗಿ ಮಾಡಿ ಮೈಸೂರು, ಬೆಳಗಾವಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಮಾದರಿ ಕ್ರೀಡಾ ಪಟುಗಳಿಗೆ ಉತ್ತಮ ವ್ಯವಸ್ಥೆಯನ್ನು ಮಾಡುತ್ತೇವೆ. ವಿಶೇಷವಾಗಿ ಬಳ್ಳಾರಿ ಜಿಲ್ಲೆಯು ಗಣಿಭಾದಿತ ಪ್ರದೇಶವಾಗಿದ್ದು ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಕೆ. ಕೆ ಆರ್. ಆರ್. ಬಿ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು
371ಜೆ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಯೋಜನೆಗಳ ಅನುದಾನ ದುರ್ಬಳಕೆ ಹಾಗೂ ಮೈತ್ರಿ ಯೋಜನೆಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು ಹಾಗೂ ಅನುದಾನ ದುರ್ಬಳಕೆಗೆ ಸಹಕಾರ ನೀಡಿರುವ ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಲಾಗುವುದು ಎಂದು ಸರ್ವ ಸಚಿವರಿಂದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂಧರ್ಭದಲ್ಲಿ ಸಚಿವರಾದ ಡಿ. ಸುಧಾಕರ್ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪೂರ,ರಹಿಂಖಾನ್, ಶಿವರಾಜ ತಂಗಡಗಿ, ಮುಖ್ಯ ಅಧಿಕಾರಿಗಳಾದ ಶಾಲೀನಿ ರಜನೀಶ್, ಅನಿರುದ್ದ್ ಶ್ರವಣ್ ಇನ್ನಿತರರು ಉಪಸ್ಥಿತರಿದ್ದರು