ಸುದ್ದಿಮೂಲವಾರ್ತೆ
ಕೊಪ್ಪಳ,ಜು.28: ಕಲಬುರಗಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿಯವರನ್ನು ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕ ಸಲಹಾ ಮಂಡಳಿ ಮಾಜಿ ಸದಸ್ಯ ಪಂಪಾಪತಿ ರಾಠಿ ಹೇಳಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ಜಿಲ್ಲೆಯಲ್ಲಿ ಕಾರ್ಖಾನೆ ಹಾಗು ಸರಕಾರದ ಕಚೇರಿಗಳಲ್ಲಿ ದುಡಿಯುವ ಗುತ್ತಿಗೆ ಕಾರ್ಮಿಕರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಈಗ ಜಿಲ್ಲಾಧಿಕಾರಿಗಳು ಒಂದಿಷ್ಟು ಸುಧಾರಣೆ ತಂದಿದೆ. ನನ್ನ ಸಲಹೆ ಮೇರಿಗೆ ರಾಜ್ಯ ಸರಕಾರ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸೂಚಿಸಿದೆ. ಇದನ್ನು ಕೊಪ್ಪಳ ಜಿಲ್ಲಾಧಿಕಾರಿಗಳು ಜಾರಿಗೆ ತಂದಿದ್ದಾರೆ.
ಬೆಳಗಾವಿಯಲ್ಲಿ ಟಾಟಾ ಮಾರ್ಕೊಪೊಲೋ ನಲ್ಲಿ ವೆಂಕಟೇಶ ಶಿಂದಿಹಟ್ಟಿ ಕಾರ್ಮಿಕರ ವಿರೋಧಿ ನೀತಿ ಅನುಸರಿಸಿದ್ದಾರೆ. ಟಾಟಾ ಮಾರ್ಕಪೊಲೋದ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ನೀತಿಯ ವಿರೋಧಿಯಾಗಿ ಟಾಟಾ ಮಾರ್ಕಪೋಲೊದವರು ನಡೆದು 300 ಜನ ಕಾರ್ಮಿಕರನ್ನು ಅಮಾನತ್ತುಗೊಳಿಸಿದೆ. ಉಪ ಕಾರ್ಮಿಕ ಆಯುಕ್ತರು ಕಾರ್ಮಿಕ ವರ್ಗಾವಣೆ ಹಾಗು ವಿಚಾರಣೆ ಮಾಡಿಲ್ಲ ಎಂದು ಆರೋಪಿಸಿದರು.
ಈಗಲೂ ಸಹ ಟಾಟಾ ಮಾರ್ಕಪೊಲೊ ಕಂಪನಿಯಲ್ಲಿ ವಿಚಾರಣೆ ಮಾಡಿ ಕಾರ್ಮಿಕರಿಗೆ ಜಯಗೊಳಿಸಲಿದ್ದಾರೆ. ಉಪಾಯುಕ್ತರು ಸರಿಯಾದ ನಡಾವಳಿಯನ್ನು ಮಾಡದೆ ಕಾರ್ಮಿಕ ನ್ಯಾಯ ಒದಗಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ನಲ್ಲಿ ದುಡಿಯುವ ಗುತ್ತಿಗೆ ಕಾರ್ಮಿಕರ ಸೌಲಭ್ಯ ನೀಡಬೇಕು ಇಲ್ಲದಿದ್ದರೆ ಜಿಪಂ ಸಿಇಒ ವಿರುದ್ದ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕೊಪ್ಪಳದಲ್ಲಿ ಕಾರ್ಖಾನೆಗಳಲ್ಲಿ ಅನ್ಯಾಯವಾಗುತ್ತಿದೆ. ಆದರೆ ಇಲ್ಲಿ ಕಾರ್ಮಿಕ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಇಲ್ಲಿಯ ಕಾರ್ಮಿಕಾಧಿಕಾರಿ ಶಿವಶಂಕರರನ್ನು ವರ್ಗಾವಣೆ ಮಾಡಬೇಕು. ಕಳೆದ ಹದಿನೈದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಡಿ ಎಚ್ ಪುಜಾರ, ಅಮರಗುಂಡಯ್ಯ, ದಿವಾಕರ ರಮೇಶ ಇದ್ದರು.