ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.29:ಕುಷ್ಟಗಿ ತಾಲೂಕಿನ ಅಡವಿಭಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಹನುಮಪ್ಪ ಎಚ್. ಕುಮಟಗಿ, ಉಪಾಧ್ಯಕ್ಷರಾಗಿ ಮುತ್ತಪ್ಪ ಹಿರೇಮನಿ, ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಎ. ದೊಟಿಹಾಳ, ಸಿದ್ದಪ್ಪ ಎಚ್. ಮನ್ನೇರಿ, ತಿಪ್ಪಣ್ಣ ಬಿ. ಸಿದ್ದಾಪುರ, ಶರಣಗೌಡ ಮ್ಯಾಗೇರಿ, ವಿಜಯಕುಮಾರ ಡಿ. ಭಾವಿಮನಿ, ಮರಿಯಪ್ಪ ಎಸ್. ಸಂಕ್ಲಾಪುರ, ಸೋಮಣ್ಣ ಬಡನ್ನವರ್ ಮತ್ತು ಮಹಿಳಾ ನಿರ್ದೇಶಕರಾಗಿ ಹನುಮವ್ವ ಕನಕಪ್ಪ ಅಡವಿಬಾವಿ ಗ್ಯಾನವ್ವ ಸುಭಾಷ್ ಇಲಕಲ್, ರೇಣುಕಾ ಹನುಮಪ್ಪ ಮಲ್ಕಾಪುರ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿಯಾಗಿ ಅಡವಿಬಾವಿ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ರಾಜಕುಮಾರ್ ನಾಯಕ ಅವರು ಕಾರ್ಯನಿರ್ವಹಿಸಿದರು. ಬಳಿಕ ನೂತನವಾಗಿ ಆಯ್ಕೆಯಾದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಗೌರವಿಸಿ ಶುಭ ಕೋರಲಾಯಿತು. ಈ ವೇಳೆ ಸಂಘದ ಕಾರ್ಯದರ್ಶಿಯಾದ ಭೋಜಪ್ಪ ಶಡ್ಲಗೇರಿ, ಸಿಬ್ಬಂದಿ ಕನಕರೆಡ್ಡಿ ಸಕ್ರಿ, ಅಡವಿಭಾವಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಹಕಾರಿ ಸಂಘಕ್ಕೆ ಆಯ್ಕೆ: ಕುಷ್ಟಗಿ ಪಟ್ಟಣದ ತಾಲೂಕ ವಿಶ್ವಕರ್ಮ ಕರಕುಶಲ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚುನಾವಣಾಧಿಕಾರಿಯಾದ ಸಹಕಾರಿ ಸಂಘಗಳ ಉಪನಿಬಂಧಕರಾದ ಸಂಗೀತಾ ಹಾಗೂ ತಾಲೂಕ ಅಧಿಕಾರಿ ಬಸಪ್ಪ ಗಾಳಿ ಅವರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ರಾಮಚಂದ್ರಪ್ಪ ಶಿವಪ್ಪ ಬಡಿಗೇರ, ಉಪಾಧ್ಯಕ್ಷರಾಗಿ ಅನೀಲಕುಮಾರ ಎಂ. ಕಮ್ಮಾರ, ನಿರ್ದೇಶಕರಾಗಿ ಅಮರೇಶಪ್ಪ ಎನ್. ಬಡಿಗೇರ, ಉಮ್ಮಣ್ಣ ಎನ್. ಬಡಿಗೇರ, ಈರಪ್ಪ ಎಂ. ಕಮ್ಮಾರ, ಕಾಳೇಶ ಸಿ. ಬಡಿಗೇರ, ಮೌನೇಶ ಕೆ. ಬಡಿಗೇರ, ಶರಣಪ್ಪ ಹೆಚ್. ಬಡಿಗೇರ, ಶಾಶ್ವತಪ್ಪ ಎನ್. ಬಡಿಗೇರ, ಗಾಯತ್ರಿ ಎಂ. ಬಡಿಗೇರ, ರಾಜೇಶ್ವರಿ ವಿ. ಬಡಿಗೇರ ಅವರು ಅವರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಕಾರ್ಯದರ್ಶಿ ರಾಮಣ್ಣ ಬಡಿಗೇರ ಬ್ಯಾಲಿಹಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.