ಸುದ್ದಿಮೂಲ ವಾರ್ತೆ
ಮೈಸೂರು, ಜು.29: ಜಿಲ್ಲಾದ್ಯಂತ 2023 ಮಾರ್ಚ್ನಿಂದ ಜುಲೈ 29 ರವರೆಗೆ 378 ಮಿಮೀ ಎಂಎಂ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ಮಳೆಬೆಳೆ ಬಗ್ಗೆ ಮಾಹಿತಿ ನೀಡಿದ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ, ಜಿಲ್ಲೆಯಲ್ಲಿ ಮಳೆ ಸಾಧಾರಣ ಮಳೆ ಆಗಿದೆ. ಪೂರ್ವ ಮುಂಗಾರು ಮಳೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದಿದೆ. ವಾಡಿಕೆಯಂತೆ ಮಾರ್ಚ್ ನಿಂದ ಮೇ ವರೆಗೆ 198 ಮಿ.ಮೀ ಇತ್ತು. ಜೂನ್ 1ರಿಂದ ಜುಲೈ 27ರವರೆಗಿನ ಮುಂಗಾರು ಅವಧಿಯಲ್ಲಿ 165.5 ಎಂ.ಎಂ ಮಳೆ ಆಗಿದೆ. ಅಂದರೆ ಜಿಲ್ಲೆಯಲ್ಲಿ 17.61 ಮಳೆ ಕೊರತೆ ಆಗಿದೆ ಎಂದು ಹೇಳಿದರು.
ಮಾರ್ಚ್ನಿಂದ ಇಲ್ಲಿಯವರೆಗೆ 378 ಎಂಎಂ ಮಳೆ ಆಗಿದೆ. ಮುಂಗಾರಿನಲ್ಲಿ 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಈಗ 2.11 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ ಎಂದು ವಿವರಿಸಿದರು.