ನವದೆಹಲಿ, ಜು.31: ಕೇಂದ್ರ ಆಹಾರ ಸಚಿವ ಪಿಯುಷ್ ಗೋಯೆಲ್ ಅವರನ್ನು ಸೋಮವಾರ ಭೇಟಿ ಮಾಡಿದ ರಾಜ್ಯ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು, ರಾಗಿ ಮತ್ತೆ ಜೋಳಕ್ಕೆ ಖರೀದಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ.
ಬಳಿಕ ಮಾತನಾಡಿರುವ ಕೆ.ಎಚ್. ಮುನಿಯಪ್ಪ, ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ಕೇಂದ್ರ ಸಚಿವ ಗೋಯಲ್ ಅವರನ್ನು ಭೇಟಿ ಮಾಡಲಾಯಿತು. ರಾಗಿ ಮತ್ತು ಜೋಳಕ್ಕೆ ಸಂಗ್ರಹಣೆ ಮಾಡುವ ಬೆಲೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಒಂದು ಕ್ವಿಂಟಲ್ಗೆ ರಾಗಿಗೆ 3,846 ರೂ. ಇದ್ದು, ಅದನ್ನು 5000 ರೂ, ಮಾಲ್ದಂಡಿ ಜೋಳ 3,225 ರೂ ಇದ್ದು, ಅದನ್ನು 4,500 ರೂ, ಸಾಮಾನ್ಯ ಜೋಳ 3,180 ಇದ್ದು, ಅದುನ್ನ 4,500 ರೂ ಹೆಚ್ಚಳ ಮಾಡಬೇಕು. ಗೊಬ್ಬರದ ಬೆಲೆ ತುಂಬಾ ಜಾಸ್ತಿ ಆಗಿರುವುದರಿಂದ ರೈತರಿಗೆ ನೆರವಾಗಲು ಖರೀದಿ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಯಿತು ಎಂದರು.
ಇವತ್ತು ರಾಷ್ಟ್ರಮಟ್ಟದಲ್ಲಿ ಗೊಬ್ಬರ, ಕೀಟನಾಶಕದ ಬೆಲೆ ಜಾಸ್ತಿ ಆಗುತ್ತಲೇ ಇದೆ. ರೈತರನ್ನು ಬೆಂಬಲಿಸಲು ಉತ್ತಮ ಬೆಲೆ ನೀಡಿ ಎಂಬ ನಮ್ಮ ಮನವಿಗೆ ಕೇಂದ್ರ ಸಚಿವರು ಉತ್ತಮವಾಗಿ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.