ಸುದ್ದಿಮೂಲವಾರ್ತೆ
ಕೊಪ್ಪಳ,ಆ.2: ನಗರದ ಜವಾಹರ ರಸ್ತೆ ಬಳಿಯ ದುರ್ಗಾದೇವಿ ಗುಡಿ ಹತ್ತಿರದ ಬರ್ಕತ್ ಮುಬಾರಕ್ ಫುಟ್ ವೇರ (ಚಪ್ಪಲಿ ಅಂಗಡಿ) ಮಂಗಳವಾರ ತಡರಾತ್ರಿ 3:00 ಗಂಟೆ ಸುಮಾರಿಗೆ ಕಳ್ಳತನವಾದ ಘಟನೆ ಜರುಗಿದೆ.
ಈ ಚಪ್ಪಲಿ ಅಂಗಡಿಯು ಮರ್ದಾನ್ ಅಲಿ ಕಳ್ಳಿಮನಿ ಅವರಿಗೆ ಸೇರಿದ ಎಂದು ತಿಳಿದು ಬಂದಿದೆ.
ಈ ಕಳ್ಳತನ ಪ್ರಕರಣದಲ್ಲಿ ಸುಮಾರು 40 ಸಾವಿರ ರೂಪಾಯಿ ನಗದು ಹಣ ಹಾಗೂ ಎರಡು ಜೊತೆ ಚಪ್ಪಲಿ ಕಳ್ಳತನವಾಗಿವೆ ಎಂದು ತಿಳಿದು ಬಂದಿದೆ.
ಚಪ್ಪಲಿ ಅಂಗಡಿ ಕಳ್ಳತನ ಮಾಡಿದ ಚಾಲಾಕಿ ಕಳ್ಳರು ಸುಮಾರು 18 ವರ್ಷದ ಒಳಗಿನ ಯುವಕರು ಎಂದು ಸಿಸಿಟಿವಿ ಪುಟೇಜ್ ಮೂಲಕ ತಿಳಿದು ಬಂದಿದೆ.
ಕಳೆದ ಒಂದು ವಾರದ ಹಿಂದೆ ಅದೇ ಸ್ಥಳದಲ್ಲಿ ಸ್ವಾಮಿ ಪಾನ್ ಶಾಪ ಕಳ್ಳತನವಾಗಿ ಸಾಕಷ್ಟು ನಗದು ಹಣ ಕಳ್ಳತನವಾಗಿದೆ.
ಇಲ್ಲಿ ನಿರಂತರ ಕಳ್ಳತನವಾಗುತ್ತಿವೆ. ಆದರೂ ಕೊಪ್ಪಳ ನಗರ ಠಾಣೆ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ.ಪೊಲೀಸರ ನಿರ್ಲಕ್ಷ್ಯ ಜನ ಹಿಡಿಶಾಪ ಹಾಕುತ್ತಿದ್ದಾರೆ.