ಸುದ್ದಿಮೂಲವಾರ್ತೆ
ಕೊಪ್ಪಳ ಆ 02: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೆಕ್ಯೂರ್ ಆಸ್ಪತ್ರೆಯಲ್ಲಿ ಮಹಿಳಾಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಕೊಪ್ಪಳದ ನಗರಸಭೆ ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಎಸ್ ಭೂಮಕ್ಕನವರು ಸಭೆಯ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.
ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರು ಅನೇಕ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು ಉಚಿತ ಆರೋಗ್ಯ ತಪಾಸಣಾ ಶಿಬಿರದ ಅನುಕೂಲತೆಯನ್ನು ಪಡೆದು ತಮ್ಮ ಆರೋಗ್ಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಕುಟುಂಬ ರಕ್ಷಣೆ ಮಾಡುವಲ್ಲಿ ಮಹಿಳೆಯ ಪಾತ್ರದ ಕುರಿತು ಕೊಪ್ಪಳ ಪಶ್ಚಿಮ ತಾಲೂಕಿನ ಯೋಜನಾಧಿಕಾರಿ ಶ ಜಗದೀಶ್ ಕೆ ಎಚ್ ಇವರು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೆಕ್ಯೂರ್ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಭಾಗ್ಯಶ್ರೀ ಗರ್ಭಕೋಶದ ಕ್ಯಾನ್ಸರ್ ಲಕ್ಷಣ ಹಾಗೂ ಮುಂಜಾಗ್ರತ ಕ್ರಮದ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಸೆಕ್ಯೂರ್ ಆಸ್ಪತ್ರೆಯ ಇನ್ನೋರ್ವ ವೈದ್ಯರಾದ ಡಾಕ್ಟರ್ ಭವಾನಿ ಪ್ರಸಾದ್ ಅವರು ಸಕ್ಕರೆ ಕಾಯಿಲೆ ಅಧಿಕ ರಕ್ತದೊತ್ತಡ ರಕ್ತ ಹೀನತೆ ಹಾಗೂ ಇತರ ಚಿಕಿತ್ಸಾಕ್ರಮದ ಕುರಿತು ಸಲಹೆ ನೀಡಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಹಾಗೂ ಇತರ ಸದಸ್ಯರು