ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 2 : ಚುನಾವಣೆಗಳಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಸೋತೆವೆಂದು ಧೃಡಿಗೆಡದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತ ಪಡೆ ಸಜ್ಜಾಗಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಕೋಡಗುರ್ಕಿ ಗ್ರಾಮದ ಕತ್ತಿ ಮಾರಮ್ಮ ದೇವಾಲಯದಲ್ಲಿ ‘ಆವತಿ ಶಕ್ತ ಕೇಂದ್ರದ ವತಿಯಿಂದ ಆಯೋಜಿಸುವ ರಕ್ತದಾನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ದೇಶಕ್ಕೆ ದುಡಿಯುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಆದರೂ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಿಳಿಸುವಲ್ಲಿ ಎಲ್ಲೋ ಕಾರ್ಯಕರ್ತರ ಪಡೆ ಎಡವಿದೆ. ಸೋಲಿನ ನಿರಾಸೆ ಬಿಟ್ಟು ಮುಂಬರುವ ಚುನಾವಣೆಗೆ ಸಜ್ಜಾಗಬೇಕು. ಕಾಂಗ್ರೆಸ್ ನ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕಾಂಗ್ರೆಸ್ ದಲ್ಲಾಳಿಗಳ ಪರ ಕೆಲಸ ಮಾಡಿದರೇ, ಕೇಂದ್ರ ಬಿಜೆಪಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯಾನಿಧಿ ಯೋಜನೆ ಸ್ಥಗಿತ ಮಾಡಿದೆ. ಕಾಂಗ್ರೆಸ್ ಗೆ ಮುಸಲ್ಮಾನರು ಮಾತ್ರವೇ ಕಾಡುತ್ತಾರೇ ಹೊರತು ಬೇರೆಯವರು ಯಾರು ಕಾಣುತ್ತಿಲ್ಲ. ಕಿಸಾನ್ ಸಮಾನ್ ಯೋಜನೆಯಡಿ, ಕೇಂದ್ರ ಸರ್ಕಾರ 6 ರಾಜ್ಯ ಸರ್ಕಾರ 4 ಸಾವಿರ ಸಹಾಯಧನ ನೀಡುತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 4 ಸಾವಿರ ಸ್ಥಗಿತ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದರು.
ಇಂತಹ ರೈತ ವಿರೋಧಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ಸರ್ಕಾರ ನೀಡುವ ಬಿಟ್ಡಿ ಭಾಗ್ಯಗಳು ಕೇಲವ ಮುಂದಿನ ಲೋಕಾಸಭಾ ಚುನಾವಣೆಯವರೆಗೂ ಸೀಮಿತವಾಗಿದೆ. ಬಿಜೆಪಿ ಸರ್ಕಾರ ನೀರಾವರಿ ಯೋಜನೆಗೆ ಮೀಸಲಿಡಿಸಿದ್ದ 23 ಸಾವಿರ ಕೋಟಿಯನ್ನು 19 ಸಾವಿರ ಕೋಟಿಗೆ ಕಾಂಗ್ರೆಸ್ ಸರ್ಕಾರ ಇಳಿಸಿದೆ ಎಂದು ಹರಿಹಾದ್ದರು.
ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅಂಬರೀಶ್ ಗೌಡ ಮಾತನಾಡಿ, ‘ಬಿಜೆಪಿ ಪಕ್ಷದಲ್ಲಿ ಯುವ ಪಡೆ ಹೆಚ್ಚಾಗಿದ್ದು, ಕಾರ್ಯಕರ್ತರು ರಾಜಕೀಯ ಹೊರತಾಗಿಯೂ ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಗಳಂತಹ ಸಮಾಜ ಸೇವೆಯಲ್ಲಿಯೂ ತೊಡೆಗಿಕೊಂಡಿದ್ದಾರೆ ಎಂದರು.
ಆ. 13 ರಂದು ಹಮ್ಮಿಕೊಂಡಿರುವ ರಕ್ತದಾನ ಶಿಬಿರಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೋಡಗಿಸಿಕೊಂಡು ರಕ್ತದಾನಿಗಳನ್ನು ಅಪಾರ ಸಂಖ್ಯೆಯಲ್ಲಿ ಕರೆತಂದು, ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದರು.
ಇದೇ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರವಿಕುಮಾರ್, ಮುಖಂಡರಾದ ನಾಗರಾಜ್ ಗೌಡ, ಮುನೀಂದ್ರ, ನಾಗೇಶ್, ಮಂಜುನಾಥ್, ಓಬದೇನಹಳ್ಳಿ ಮುನಿಯಪ್ಪ, ಭರತ್, ಮುನಿರಾಜು, ಸುರೇಶ್ ಆಚಾರ್, ಪುನೀತಾ, ದಾಕ್ಷಾಯಿಣಿ, ಸೇರಿದಂತೆ ಅನೇಕರು ಇದ್ದರು.