ಸುದ್ದಿಮೂಲವಾರ್ತೆ
ಕೊಪ್ಪಳ,ಆ.3: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಿರುದ್ದ ಇಂದು ಯಲಬುರ್ಗಾ ಜೆಡಿಎಸ್ ಮುಖಂಡರು ತಿರುಗೇಟು ನೀಡಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನಾಪುರ ರಾಯರಡ್ಡಿ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಪಡೆಯುವಂಥ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಬಾಯಿ .ಮನಸ್ಥಿತಿ ಸರಿ ಅಲ್ಲ. ರಾಯರಡ್ಡಿ ಕುಮಾರಸ್ವಾಮಿ ನಡಗುತ್ತಿದ್ದ ಎಂದು ಹೇಳುತ್ತಿರುವುದು ಶೋಭೆ ತರುವಂಥದ್ದು ಅಲ್ಲ. ಕುಮಾರಸ್ವಾಮಿ ಮೀರಿಸುವ ವ್ಯಕ್ತಿಯ ಬಗ್ಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಇದೆ ಎಂದು ವಾಗ್ದಾಳಿ ನಡೆಸಿದರು. ನಿನಗೆ ಧೈರ್ಯ ಇದ್ದರೆ ಅವ ರಾಹುಲ್ ಗಾಂಧಿ ಬಗ್ಗೆ ಬಾಯಿಗೆ ಬಂದಂಗ ಮಾತನಾಡುತ್ತಾರೆ. ನಿನಗೆ ಧೈರ್ಯ ಇದ್ದರೆ ಪಕ್ಷೇತರನಾಗಿ ನಿಂತು ಗೆಲ್ಲಲಿ. ರಾಯಲ್ ರಡ್ಡಿ ಅಲ್ಲ ಲೋಕಲ್ ರಡ್ಡಿ .ಮುಂದಿನ ದಿನಗಳಲ್ಲಿ ಕಪ್ಪು ಮಸಿ ಬಳಿಯುವಂತೆ ಕೆಲಸ ಮಾಡುತ್ತದೆ. ಯಲಬುರ್ಗಾ ಕ್ಷೇತ್ರಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ವಿಧಾನಸಭಾ ಕ್ಷೇತ್ರದ ಸಭಾಧ್ಯಕ್ಷರು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಬೇಕೆಂದು ಹೇಳಿದರು.
ರಾಯರಡ್ಡಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಲಿ ಅಥವಾ ತಪ್ಪು ಒಪ್ಪಿಕೊಳ್ಳಿ ಅವರ ಕ್ಷೇಮ ಕೇಳಿದರೆ ಬಿಡುತ್ತವೆ. ಇಲ್ಲದಿದ್ದರೆ ಅವರ ಕಪ್ಪು ಮಸಿ ಬಳಿಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಾ ಮಹೇಶ ಗೋವನಕೊಪ್ಪ, ಶರಣಪ್ಪ ರಾಂಪುರ, ಬಸವರಾಜ ಗುಳಗುಳಿ, ಕೆಂಚಪ್ಪ ಹಳ್ಳಿ ಇದ್ದರು.