ಸುದ್ದಿಮೂಲವಾರ್ತೆ
ಕೊಪ್ಪಳ,ಆ.3:ವಿಚಾರಣೆ ನೆಪದಲ್ಲಿ ಕೈಗೆ ಕೊಳ ಹಾಕಿ ಪೊಲೀಸರು ಕೂಡಿ ಹಾಕಿದ ಪ್ರಕರಣ ಬಯಲಾಗಿದೆ. ಪೊಲೀಸರ ವಿರುದ್ದ ಕ್ರಮಕ್ಕೆ ಕೊಳಹಾಕಿಸಿಕೊಂಡವರು ಮನವಿ ಮಾಡಿಕೊಂಡಿದ್ದಾರೆ.
ಕನಕಗಿರಿ ತಾಲೂಕಿನ ಬೊಮ್ಮಸಾಗರ ತಾಂಡಾದ ಸಣ್ಣ ಹನುಮಂತಪ್ಪ ಎಂಬುವವರು ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದರು. ಈ ಸಮಯದಲ್ಲಿ ಯಾವುದೊ ಪ್ರಕರಣಕ್ಕೆ ಸಾಕ್ಷಿಗಾಗಿ ಪೊಲೀಸರು ಕನಕಗಿರಿ ಪೊಲೀಸ್ ಠಾಣೆಗೆ ಬರಲು ಫೋನು ಮಾಡಿ ಕರೆಸಿಕೊಂಡು ವಿಚಾರಣೆ ನೆಪದಲ್ಲಿ ಕೈಗೆ ಕೊಳ ಹಾಕಿ ಕೂಡಿ ಹಾಕಿದ್ದಾರೆ. ಕನಕಗಿರಿ ಪೊಲೀಸರು ಯುವಕನ ಬಂಧಿಸಿರುವ ಫೋಟೊ ಈಗ ವೈರಲ್ ಆಗಿದೆ.
ಈ ಕುರಿತು ಸಣ್ಣ ಹನುಮಂತಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದು. ಮಹಾರಾಷ್ಟ್ರದಲ್ಲಿ ದುಡಿಯಲು ಹೋಗಿದ್ದ ನನಗೆ ಕರೆಸಿ
ಸಾಕ್ಷಿಗಾಗಿ ಕೂಡಿ ಹಾಕಿದ್ದರು. ಈ. ಪ್ರಕರಣ ಗಂಭೀರವಲ್ಲ ಆದರೂ ನನ್ನನ್ನು ಕೂಡಿ ಹಾಕಿದ್ದಾರೆ ಎಂದು ಸಣ್ಣ ಹನುಮಂತಪ್ಪ ಗೃಹ ಸಚಿವರಿಗೆ ಪತ್ರ ಬರೆದು ಪೊಲೀಸರ ವಿರುದ್ದ ಕ್ರಮಕೈಗೊಳ್ಳಿ ನನಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡ. ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಡಿವಾಯ್ ಎಸ್ಪಿ ಹಂತದಲ್ಲಿ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿಯ ನಂತರ ಪೊಲೀಸರು ತಪ್ಪಿತಸ್ಥರಿದ್ದರೆ ಕ್ರಮ ಎಂದ ಕೊಪ್ಪಳ ಎಸ್ಪಿ ಹೇಳಿದ್ದಾರೆ.