ಸುದ್ದಿಮೂಲವಾರ್ತೆ
ಕೊಪ್ಪಳ ಆ 03: ರೈತರ ತೀವ್ರ ಒತ್ತಡಕ್ಕೆ ಮಣಿದು ತುಂಗಭದ್ರಾ ಜಲಾಶಯದಿಂದ ಐಸಿಸಿ ಸಭೆ ಇಲ್ಲದೆ ನಾಲೆಗೆ ಇಂದಿನಿಂದ ನೀರು ಹರಿಸುವ ಕಾರ್ಯ ಆರಂಭವಾಗಿದೆ.
ಮುಂಗಾರು ಹಂಗಾಮು ಆರಂಭವಾಗಿದ್ದು ಜುಲೈ ತಿಂಗಳಲ್ಲಿಯೇ ನಾಲೆಗಳಿಗೆ ನೀರು ಬಿಡುವ ಜಲಾಶಯದಲ್ಲಿ ಈ ಬಾರಿ ಆಗಷ್ಟ ತಿಂಗಳಾದರೂ ನಾಲೆಗಳಿಗೆ ನೀರು ಬಿಟ್ಟಿರಲಿಲ್ಲ. ಈ ಮಧ್ಯೆ ನಾಲೆಗಳಿಗೆ ನೀರು ಬಿಡುವುದು ವಿಳಂಭವಾದರೆ ಭತ್ತದ ಇಳುವರಿ ಕಡಿಮೆಯಾಗುತ್ತದೆ. ಭತ್ತದ ನಾಟಿಗಾಗಿ ಹಾಕಿರುವ ಸಸಿ ಮಡಿಯಲ್ಲಿ ಭತ್ತ ಸಸಿಗಳು 60 ದಿನ ದಾಟುತ್ತವೆ. ಬೇಗ ನಾಲೆಗೆ ನೀರು ಬಿಡಿ ಎಂದು ರೈತರು ಆಗ್ರಹಿಸಿದ್ದರು.
ಈ ಮಧ್ಯೆ ಜಲಾಶಯದಲ್ಲಿ ಜುಲೈ ಎರಡನೆಯ ವಾರದವರೆಗೂ ನೀರು ಬಂದಿರಲಿಲ್ಲ. ಜುಲೈ ತಿಂಗಳಲ್ಲಿ ಮಲೆನಾಡು ಹಾಗು ಉತ್ತರ ಒಳನಾಡಿನಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ 83.077 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಮಧ್ಯೆ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದರೂ ನಾಲೆಯಲ್ಲಿ ಎಸ್ಕೇಪ್ ರಿಪೇರಿ ಹಿನ್ನೆಲೆಯಲ್ಲಿ ನಾಲೆಗೆ ನೀರು ಬಿಟ್ಟಿರಲಿಲ್ಲ. ಈ ಮಧ್ಯೆ ಇಂದು ಐಸಿಸಿ ಸಭೆ ಇಲ್ಲದೆ ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲಾಗುತ್ತಿದೆ.
ತುಂಗಭದ್ರಾ ಎಡ, ಬಲದಂಡೆ ನಾಲೆಗೆ 5776 ಕ್ಯೂಸೆಕ್ ನೀರು ಹರಿಸುವ ಕಾರ್ಯ ಆರಂಭ ಜಲಸಂಪನ್ಮೂಲ ಸಚಿವರ ಆದೇಶದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡಲಾಗುತ್ತಿದೆ.ತುಂಗಭದ್ರಾ ಎಡದಂಡೆ ನಾಲೆ ಈಗ 200 ಕ್ಯೂಸೆಕ್ ನಿಂದ 3000 ಕ್ಯೂಸೆಕ್ ನೀರು ಮೇಲ್ಮಟ್ಟದ ಕಾಲುವೆ ಈಗ 1000 ಕ್ಯೂಸೆಕ್ಬಲದಂಡೆ ಕೆಳ್ಮಟ್ಟದ ಕಾಲುವೆಗೆ 500 ಕ್ಯೂಸೆಕ್ ನೀರು ಹರಿಸುವ ಕಾರ್ಯ ಆರಂಭವಾಗಿದೆ.
ಎಡದಂಡೆ ನಾಲೆಯ 6 ಲಕ್ಷ ಎಕರೆ ಪ್ರದೇಶಕ್ಕೆ ನೀರು ಹರಿಸುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.