ಕೊಪ್ಪಳ : ಹೈರಾಣು ಮಾಡುತ್ತಿರುವ ಮದ್ರಾಸ್ ಐ
ಸುದ್ದಿಮೂಲವಾರ್ತೆ
ಕೊಪ್ಪಳ,ಆ.4: ಈಗ ಎಲ್ಲಿ ನೋಡಿದರೂ ಮದ್ಯಾಸ್ ಐ ದ್ದೆ ಮಾತು. ಬಹುತೇಕರು ಕಣ್ಣುಗಳಿಗೆ ಕನ್ನಡಕ ಹಾಕಿಕೊಂಡು ತಿರುಗಾಡುವಂತಾಗಿದೆ. ಕಣ್ಣು ಬೇನೆಯಿಂದ ಕಣ್ಣು ತೆರೆಯಲು ಆಗದೆ ಗೋಳಾಡುವಂತಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮದ್ರಾಸ್ ಐ ಕಾಯಿಲೆಗೆ ಕೊಪ್ಪಳ ಜಿಲ್ಲೆಯು ಹೈರಾಣಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮದ್ರಾಸ್ ಐ( ಕಣ್ಣು ಬೇನೆ) ಕಾಣಿಸಿಕೊಳ್ಳುತ್ತಿದೆ. ಬಹುತೇಕರ ಕಣ್ಣುಗಳು ಕೆಂಪಾಗಿದ್ದು ಕಣ್ಣು ಊದಿಕೊಂಡಿವೆ. ಕಣ್ಣುಗಳನ್ನು ತೆರೆಯಲು ಆಗದಷ್ಟು ನೋವು ಇದೆ. ಕಣ್ಣುಗಳಲ್ಲಿ ಪಿಚ್ಚು ಕಾಣಿಸಿಕೊಂಡಿದೆ. ಒಮ್ಮೆ ಬಂದರೆ ನಾಲ್ಕೈದು ದಿನ ಕಣ್ಣು ಬೇನೆ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡುವ ಕಣ್ಣು ಬೇನೆ ಮನೆಯಲ್ಲಿ ಒಬ್ಬರಿಗೆ ಬಂದರೆ ಇತರರಿಗೂ ಹರಡುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಈಗ ಪ್ರತಿ ದಿನ ತಾಲೂಕುಗಳಿಂದ ನಿತ್ಯ 700 ಪ್ರಕರಣಗಳು ವರದಿಯಾಗಿವೆ. ಸರಾಸರಿಯಾಗಿ ಜಿಲ್ಲೆಯಲ್ಲಿ 2400 ಜನರಲ್ಲಿ ಕಣ್ಣು ಬೇನೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಲಿಂಗರಾಜ ತಿಳಿಸಿದ್ದಾರೆ.
ಇದು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದೆ. ಇದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಜಾಗೃತೆಯನ್ನು ವಹಿಸಬೇಕು. ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು. ಕಣ್ಣುಗಳನ್ನು ಮುಟ್ಟಬಾರದು. ನೇರವಾಗಿ ನೋಡುವದರಿಂದ ಕಣ್ಣು ಬೇನೆ ಬರುವುದಿಲ್ಲ. ಒಬ್ಬರು ಕಣ್ಣುಗ ಮುಟ್ಟಿದ ಕೈ ಇನ್ನೊಬ್ಬರನ್ನು ಮುಟ್ಟಿದಾಗ ಈ ಕಾಯಿಲೆ ಹರಡುತ್ತಿದೆ. ಮದ್ರಾಸ್ ಐ ಗೆ ಈಗ ಜಿಲ್ಲೆಯಲ್ಲಿ ಕಣ್ಣಿಗೆ ಹಾಕಿಕೊಳ್ಳುವ ಔಷಧಿಯನ್ನು ವಿತರಿಸಲಾಗುತ್ತಿದೆ. ಕಣ್ಣು ಬೇನೆಯ ಬಗ್ಗೆ ಭಯ ಬೇಡ ಆದರೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅಷ್ಟೇನು ಅಪಾಯಕಾರಿ ಅಲ್ಲದ ಮದ್ರಾಸ್ ಐ ನ್ನು ನಿಯಂತ್ರಿಸಬಹುದಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮದ್ರಾಸ್ ಐ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕಣ್ಣುಗಳಿಗೆ ಚಿಕಿತ್ಸೆಗಾಗಿ ಜನರು ಬರುತ್ತಿದ್ದಾರೆ. ಕೆಲವು ಶಾಲಾ ಕಾಲೇಜುಗಳಲ್ಲಿ ಈ ಕಾಯಿಲೆ ವ್ಯಾಪಕವಾಗಿದ್ದು. ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿದೆ.