ಸುದ್ದಿಮೂಲವಾರ್ತೆ
ಕೊಪ್ಪಳ ಆ 04: ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದವನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸಾವಿಗೆ ಕಾರಣ ನಿಗೂಢವಾಗಿದೆ.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸ್ಥಳದಲ್ಲಿದ್ದವರು ದಾಖಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ರಾಮಣ್ಣ ಬಂಡಿವಡ್ಡರ (42) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.
ಆತಹತ್ಯೆಗೆ ಯತ್ನಿಸಿದ ವೇಳೆ ಬರೆದಿರುವ ಡೆತ್ ನೋಟ್ ನಲ್ಲಿ ನಾಲ್ವರು ಹೆಸರು ಬರೆದಿದ್ದಾನೆ.
ಅದರಲ್ಲಿ ದಾವಣಗೆರಿಯ ಕೆವಿಆರ್ ಕನ್ಸ್ಟ್ರಕ್ಷನ್ ದಾವಣಗೆರೆಯ ಎಚ್. ನಾರಾಯಣಪ್ಪ, ಪ್ರಜ್ವಲ್, ಶ್ರೀನಿವಾಸರಡ್ಡಿ,ಕೆ. ವೆಂಕಟರಾಯರಡ್ಡಿ ಎಂಬ ಹೆಸರು ಅವರ ಫೋನ್ ನಂಬರ್ ಬರೆದಿದ್ದಾನೆ. ಅವರು ನನಗೆ ಪೇಮೆಂಟ್ ಕೊಡಬೇಕು. ಹೀಗಾಗಿ ಈ ರೀತಿ ಮಾಡಿಕೊಂಡಿರುವೆ ಎಂದು ನೋಟ್ ನಲ್ಲಿ ಬರೆದಿದ್ದಾನೆ.
ಆದರೆ ಆತನ ಕೊಪ್ಪಳಕ್ಕೆ ಯಾಕೆ ಬಂದಿದ್ದ ಎಂಬ ಮಾಹಿತಿ ತಿಳಿಯುತ್ತಿಲ್ಲ. ಜಿಲ್ಲಾಡಳಿತ ಭವನದಲ್ಲಿ ಯಾಕೆ ಆತ್ಮಹತ್ಯೆಗೆ ಯತ್ನಿಸಿ. ಆತನಿಗೂ ಕೊಪ್ಪಳಕ್ಕೂ ಏನು ಸಂಬಂಧ ಎಂಬುವುದು ನಿಗೂಢವಾಗಿದೆ.
ಈ ಘಟನೆಯ ನಂತರ ಕೊಪ್ಪಳ ಡಿವಾಯ್ ಎಸ್ಪಿ ಶರಣಪ್ಪ ಸುಬೇದಾರ. ನಗರಠಾಣೆ ಇನ್ಸೆಫೆಕ್ಟರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆತ್ಮಹತ್ಯೆ ತಡೆಗಟ್ಟಲು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ SAHAI ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಸಂಖ್ಯೆ: 080 – 25497777