ಸುದ್ದಿಮೂಲವಾರ್ತೆ
ಕೊಪ್ಪಳ,ಆ.6: ಸಚಿವ ಶಿವರಾಜ ತಂಗಡಗಿ ನನ್ನನ್ನು ಕಾಗೆ ಕೊಗಿಲೆಗೆ ಹೊಲಿಸಿದ್ದಾರೆ. ಆದರೆ ಕಾಗೆಯು ಕರೆದು ತಿನ್ನುವ ಗುಣವಿದೆ ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂದು ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸಗೂರು ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಾಗೆಯು ಎಲ್ಲರನ್ನೂ ಕರೆದುಕೊಂಡು ತಿನ್ನುವ ಜೀವನ. ಕೋಗಿಲೆ ಎಲ್ಲರನ್ನೂ ಕರೆದುಕೊಂಡು ತಿನ್ನುವ ಜೀವನವಲ್ಲ.ಕಾಗೆ ಶನಿ ಮಹಾತ್ಮನ ವಾಹನ. ಮನುಷ್ಯನಿಗೆ ಕಷ್ಟ ಬಂದಾಗ ಕಾಗೆಯ ವಾಹನದ ಶನಿಮಹಾತ್ಮನ ದರ್ಶನಕ್ಕೆ ಹೋಗುತ್ತಾರೆ ಹೊರತು ಕೋಗಿಲೆ ದರ್ಶನಕ್ಕೆ ಹೋಗುವುದಿಲ್ಲ.ತಂಗಡಗಿ ಸಚಿವರಾಗಿ ಗೌರವಸ್ಥಾನದಲ್ಲಿದ್ದಾರೆ. ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.
ನಾನು ಮುಂಬೈ, ಡೆಲ್ಲಿಗೆ ಲಾಡ್ಜ್ನಲ್ಲಿ ಮಲಗಿಕೊಳ್ಳಲು ಹೋಗಿಲ್ಲ. ಸರಕಾರದ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೆ ಎಂದು ಹೇಳಿದ್ದಾರೆ.ಲಾಡ್ಜ್, ರೆಸ್ಟೋರೆಂಟ್ಗೆ ಹೋಗಿ ಮಲಗಿಕೊಳ್ಳಲು ಸರಕಾರದಿಂದ ಅನುಮತಿ ಇದೆ. ಕಾನೂನು ಚೌಕಟ್ಟಿನಲ್ಲಿ ಹೋಗಿ ಮಲಗಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಹೋಗಿ ಮಲಗಲು ಸಂವಿಧಾನದಲ್ಲಿ ಅವಕಾಶವಿಲ್ಲ.ಇದನ್ನು ನಾನು ಒಡೆದು ಹೇಳಬಾರದು. ನಾನು ಹೇಳಿದ್ದು ಅವರಿಗೆ ಅರ್ಥವಾಗುತ್ತದೆ ಎಂದರು.
ದಡೇಸೂಗೂರು ಕನ್ನಡವನ್ನು ಸರಿಯಾಗಿ ಮಾತನಾಡುವುದನ್ನು ಮೊದಲು ಕಲಿಯಲಿ ಎಂಬ ತಂಗಡಗಿ ಹೇಳಿದ್ದಾರೆ. ನಾನೂ ಕನ್ನಡವನ್ನೇ ಮಾತನಾಡುತ್ತೇನೆ. ರಾಜ್ಯದ ಆರೂವರೆ ಕೋಟಿ ಜನರು ಮಾತನಾಡುವ ಭಾಷೆಯನ್ನೇ ಮಾತನಾಡುತ್ತೇನೆ.ನಾನೇನು ತಮಿಳು, ತೆಲುಗು, ಇಂಗ್ಲೀಷ್ ಮಾತನಾಡುತ್ತೇನಾ? ನಾನು ಅಚ್ಚ ಕನ್ನಡವನ್ನೇ ಮಾತನಾಡುತ್ತೇನೆ ಎಂದು ಸ್ಪಷ್ಠಪಡಿಸಿದರು.
ನವಲಿ ಜಲಾಶಯದ ಬಗ್ಗೆ ನಮ್ಮ ಸರಕಾರ ಯೋಜನೆ ರೂಪಿಸಿತು. 1 ಸಾವಿರ ಕೋಟಿ ಅನುದಾನ ನೀಡಿತು.ಇದು ರೈತರ ಹಿತಾಸಕ್ತಿಗಾಗಿ ಪಕ್ಷಬೇಧ ಮರೆತು ಮಾಡಬೇಕು. ಆದರೆ ಈ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಇಚ್ಛಾಶಕ್ತಿ ಇಲ್ಲ.ನಾನು ತಂದಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದು ತೋರಿಸಲಿ. ಸಚಿವ ಶಿವರಾಜ ತಂಗಡಗಿ ಗೆ ಮದ ಬಂದಿದೆ
ನಾವು ಆ ಮದಕ್ಕೆ ಮೂಗುದಾರ ಹಾಕುತ್ತೇವೆ. ಅದಕ್ಕೆ ಒಂದಿಷ್ಟು ಟೈಂ ತೆಗೆದುಕೊಳ್ಳುತ್ತೆ ಅಷ್ಟೆ
ಬಸವರಾಜ ದಡೇಸಗೂರು ಹೇಳಿದರು.