ಪತ್ರಿಕೆಗಳು ಅಭಿವೃದ್ಧಿಪರವಾಗಿರಬೇಕು-ಶಾಸಕ ರಾಘವೇಂದ್ರ ಹಿಟ್ನಾಳ
ಸುದ್ದಿಮೂಲವಾರ್ತೆ
ಕೊಪ್ಪಳ. ಆ.೬: ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಜನರ ನಡುವೆ ಸಾಮರಸ್ಯ ಮೂಡಿಸುವುದರ ಜೊತೆಗೆ ಪತ್ರಿಕೆಗಳು ಸದಾ ಅಭಿವೃದ್ಧಿಪರವಾಗಿರಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.
ಅವರು ಭಾನುವಾರ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದ ಬಳಿ ಇರುವ ಕೊಪ್ಪಳ ಸಂಜೆ ನೂತನ ಸಂಜೆ ದಿನಪತ್ರಿಕೆಯ ಬಿಡುಗಡೆ ಹಾಗೂ ಪತ್ರಿಕಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಪತ್ರಿಕೆಗೆ ಶುಭ ಹಾರೈಸಿದ ಅವರು, ಪತ್ರಿಕೆಗಳು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸರಕಾರ ಹಾಗೂ ನಾಗರಿಕರ ನಡುವೆ ಸಂಪರ್ಕದ ಕೊಂಡಿಯಾಗಿಯೂ ಪತ್ರಿಕೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಪತ್ರಿಕೆಗಳು ಸದಾ ಅಭಿವೃದ್ಧಿಪರವಾಗಿ ಕೆಲಸ ಮಾಡಬೇಕೆಂದರು. ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳ, ಪತ್ರಕರ್ತರ ಪಾತ್ರ ಬಹು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸ್ಥಳೀಯ ಜ್ಞಾನಬಂಧು ಸ್ಕೂಲ್ನ ಅಧ್ಯಕ್ಷ ಹಾಗೂ ಮೋಚಿ ಸಮಾಜದ ಮುಖಂಡ ದಾನಪ್ಪ ಜಿ.ಕವಲೂರು, ಬಿಸರಹಳ್ಳಿ ಗ್ರಾ.ಪಂ.ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್, ಹಿರೇಸಿಂದೋಗಿ ಪ್ರಗತಿ ಗ್ರಾಮೀಣ ಬ್ಯಾಂಕನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಜಂಗಮಶೆಟ್ಟಿ, ಜಗದೀಶ ತೆಗ್ಗಿನಮನಿ, ಮುಸ್ತಾಫ್ ಅತ್ತಾರ, ಅಮರ ಕಲಾಲ, ಶಿವು ಕೋಣಂಗಿ, ಈರಣ್ಣ ಬುಲ್ಟಿ, ಮಂಜುನಾಥ ತರಕಾರಿ, ಮುತ್ತುಸ್ವಾಮಿ, ಈರಣ್ಣ ತೆಗ್ಗಿನಮನಿ, ರೇಣುಕಪ್ಪ ಕುಟುಗನಹಳ್ಳಿ, ಪತ್ರಕರ್ತರಾದ ಎಂ.ಸಾದಿಕ್ ಅಲಿ, ಜಿ.ಎಸ್.ಗೋನಾಳ, ಹರೀಶ್ ಎಚ್.ಎಸ್, ವೈ.ಬಿ.ಜೂಡಿ, ವೀರಣ್ಣ ಕಳ್ಳಿಮನಿ, ಹನುಮಂತ ಹಳ್ಳಿಕೇರಿ, ರವಿಚಂದ್ರ ಬಡಿಗೇರ, ಪಕೀರಪ್ಪ ಗೋಟೂರ, ಪ್ರಭು ಚೆನ್ನದಾಸರ, ಲಲಿತಾ ಪ್ರಜಾರ, ಉದಯ ತೋಟದ, ಕೊಪ್ಪಳ ಸಂಜೆ ಸಂಪಾದಕ ಆನಂದ ಜಾಲಿಹಾಳ, ಸಹ ಸಂಪಾದಕ ರಮೇಶ ಪವಾರ್ ಮತ್ತಿತರರು ಉಪಸ್ಥಿತರಿದ್ದರು.