ಸುದ್ದಿಮೂಲ ವಾರ್ತೆ
ಹೊಸಕೋಟೆ,ಆ.6: ಸೂಲಿಬೆಲೆ ರಸ್ತೆ ರಾಷ್ಟ್ರೀಯ ಹೆದ್ದಾರಿ 207 ರಲ್ಲಿ ಕಳೆದ ಒಂದು ವರ್ಷಗಳಿಂದ ನಗರದಲ್ಲಿ ಉತ್ಪತ್ತಿಯಾದ ಕಟ್ಟಡ ಸಾಮಗ್ರಿಗಳು ಮತ್ತು ತ್ಯಾಜ್ಯವನ್ನು ಸುರಿದು ಸುದ್ದಿಯಾಗಿತ್ತು. ಅದನ್ನುಶಾಸಕರು ಒಂದು ವಾರಗಳ ಕಾಲ ಜೆಸಿಬಿಗಳ ಮೂಲಕ ತೆರವುಗೊಳಿಸಿ ಮುಕ್ತ ಮಾಡಿದ್ದರು. ಆದರೆ ಮತ್ತೆ ಸಾರ್ವಜನಿಕರು ಮತ್ತು ಕೆಲವರು ಹಳೆಯ ಕಟ್ಟಡಗಳ ಕಲ್ಲು, ಮಣ್ಣು ಇನ್ನಿತರೆ ತ್ಯಾಜ್ಯಗಳನ್ನು ಸುರಿಯುವುದರ ಜೊತೆಗೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಸಹ ಪ್ಲಾಸ್ಟಿಕ್ ಕವರ್ಗಳಲ್ಲಿ ತಂದು ರಾಜಾರೋಷವಾಗಿ ಬಿಸಾಡುತ್ತಿದ್ದಾರೆ.
ಇದನ್ನು ಕಂಡು ಕಾಣದಂತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಮುಕ್ತಿ ನೀಡಬೇಕಿದೆ ಇದಾಗದ ಹೊರೆತು ಸಾರ್ವಜನಿಕರು ಬಾಯಿ, ಮೂಗು ಮುಚ್ಚಿಕೊಂಡು ದಿನ ನಿತ್ಯ ಓಡಾಡುವಂತಹ ಪರಿಸ್ಥಿತಿ ಬಂದಿದೆ. ಈ ತ್ಯಾಜ್ಯಗಳನ್ನು ತಿನ್ನಲು ನಾಯಿಗಳ ಹಿಂದು ರಸ್ತೆ ಬದಿಯಲ್ಲಿ ಓಡಾಡುತ್ತಿರುವುದರಿಂದ ದ್ವಿಚಕ್ರ ಸವಾರರು ಹಿಂಸೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸರ್ಕಾರ ಇದಕ್ಕೂ ಮುನ್ನ ಚಿಕ್ಕ ಅಮಾನಿಕೆರೆ ಬಳಿಯವರೆಗೂ ಯಾರ ಕಸ ಹಾಕದಂತೆ ತಡೆಯಲು ಪ್ರಯತ್ನ ಮಾಡಬೇಕು. ಮೀನುಗಾರ ಸಂಘದ ಅಧ್ಯಕ್ಷ ಚಿನ್ನಣ್ಣ ಸರ್ಕಾರವನ್ನು ಮತ್ತು ಇಲಾಖೆಯನ್ನು ಒತ್ತಾಯಿಸಿದ್ದಾರೆ.