ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಆ. 6 : ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ವೈಟ್ ಫೀಲ್ಡ್ ಏರಿಯಾ ಕಾಮೆನ್ಸ್ ಮತ್ತು ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೇಶ್ ಮಲ್ಯ ಹೇಳಿದರು.
ವೈಟ್ ಫೀಲ್ಡ್ ಸಮೀಪದ ಹೂಡಿಯ ಗೋಪಾಲನ್ ಕಾಲೇಜು ಆಫ್ ಕಾಮರ್ಸ್ ನ ಆವರಣದಲ್ಲಿ ಏರ್ಪಡಿಸಿದ್ದ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಯನ್ನು ಹೊಂದಿದ್ದು, ಅಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು ಎಂದರು.
ಗೋಪಾಲನ್ ಕಾಲೇಜು ಆಫ್ ಕಾಮರ್ಸ್ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಫೇಸ್ ಪೇಂಟಿಂಗ್, ಕುಕ್ಕಿಂಗ್, ಮೆಹಂದಿ, ಮೊಬೈಲ್ ಫೋಟೋಗ್ರಫಿ, ಗ್ರೂಪ್ ಡ್ಯಾನ್ಸ್,ಫ್ಯಾಷನ್ ಶೋ,ರಾಕ್ ಬೆಟಲ್, ಸೋಲೋ ಸಿಂಗಿಂಗ್, ಕಾರ್ಪೋರೆಟ್ ರೇಡಿಯೋಸ್ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ವೈಟ್ ಫೀಲ್ಡ್ ಸುತ್ತಮುತ್ತಲಿನ ಕಾಲೇಜಿನ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಪಾಲನ್ ಫೌಂಡೇಷನ್ ಜಂಟಿ ಕಾರ್ಯದರ್ಶಿ ಸುನೀತ್ ಪ್ರಭಾಕರ್,ಬಸಿಇಓ ಸಿ.ಎಮ್,ಬಾಸ್ಕರ್ ರೆಡ್ಡಿ, ಡೀನ್ ಆನಂದಪ್ಪ, ಪ್ರಾಂಶುಪಾಲರಾದ ಕೆ.ಸುಜಿ,ರಾಜೇಂದ್ರ ಇದ್ದರು.