ಸುದ್ದಿಮೂಲವಾರ್ತೆ
ಕೊಪ್ಪಳ ಆ 07: ಇತ್ತೀಚಿಗೆ ಜೋಡಿಸಿದ ಎಸ್ಕೇಪ್ ಗೇಟಿನಲ್ಲಿ ನೀರು ಸೋರಿಕೆಯಾಗುತ್ತಿರುವ ಕಂಡು ಬಂದಿದೆ. ಅಧಿಕಾರಿಗಳು ಸೋರಿಕೆ ತಡೆಯಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಬಳಿಯತುಂಗಭದ್ರಾ ಎಡದಂಡೆ ನಾಲೆಯ 10 ನೆಯ ಮೈಲಿನಲ್ಲಿರುವ ಎಸ್ಕೇಪ್ ಗೇಟ್ ನಲ್ಲಿ ಸೋಮುವಾರ ಮುಂಜಾನೆಯಿಂದ ಸೋರಿಕೆ ಕಂಡು ಬಂದಿದೆ. ತುಂಗಭದ್ರಾ ಎಡದಂಡೆ ನಾಲೆಯಲ್ಲಿ 4000 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈ ನೀರಿನ ಒತ್ತಡದ ಹಿನ್ನೆಲೆಯಲ್ಲಿ ಎಸ್ಕೇಪ್ ಗೇಟ್ ನಲ್ಲಿ ನೀರು ಸೋರಿಕೆಯಾಗುತ್ತಿದೆ.
ತಕ್ಷಣ ಎಚ್ಚೆತ್ತ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಕಾಲುವೆಯ ನೀರು ಹರಿವು ಬಂದ್ ಮಾಡಿ ರಿಪೇರಿ ಮಾಡುತ್ತಿದ್ದಾರೆ. ಈ ಗೇಟ್ ನ್ನು ಇತ್ತೀಚಿಗೆ ಬದಲಾವಣೆ ಮಾಡಲಾಗಿತ್ತು. ಬದಲಾವಣೆಗಾಗಿಯೇ ತಡವಾಗಿ ಕಾಲುವೆ ನೀರು ಬಿಡಲಾಗಿತ್ತು. ಈಗ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಸೋರಿಕೆಯಾಗುತ್ತಿದೆ. ಆದರೂರೈತರು ಆತಂಕ ಪಡುವುದು ಬೇಡ. ಬೇಗ ಸರಿಪಡಿಸಲಾಗುವುದು ಎನ್ನುವ ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.