ಸುದ್ದಿಮೂಲ ವಾರ್ತೆ
ತುಮಕೂರು, ಆ. 8 : ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಕುಲಪತಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಜನ್ಮ ದಿನ ಅಂಗವಾಗಿ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರು ಭಾಗವಹಿಸಿ, ಉಚಿತ ರಕ್ತದ ಗುಂಪು ಪರೀಕ್ಷೆ ನಡೆಸಿದರು. ಸುಮಾರು 35ಕ್ಕೂ ಹೆಚ್ಚು ಯುನಿಟ್ ರಕ್ತವನ್ನು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ದಾನ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರತಿವರ್ಷವೂ ಆಚರಿಸುವ ವರ್ಣ ವೈಭವ ಕಾರ್ಯಕ್ರಮಕ್ಕೆ ಚಾಲನೆ
ನೀಡಲಾಯಿತು. ವಿದ್ಯಾರ್ಥಿಗಳು ಕೆಂಪು ಬಣ್ಣದ ಧಿರಿಸು ಧರಿಸಿ ಸ್ನೇಹಿತರೊಂದಿಗೆ ಸಂಭ್ರಮಿಸಿದರು, ಮೊದಲ ದಿನ ಎಂ.ಕಾಂ ವಿದ್ಯಾರ್ಥಿಗಳು ರಕ್ತದಾನದ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಪರಮೇಶ್ವರ ಅವರ ಜನ್ಮದಿನ ಹಾಗೂ ವರ್ಣ ವೈಭದ ಅಂಗವಾಗಿ 50 ಎತ್ತರದ ಕಟೌಟ್ಗಳನ್ನು ಅಳವಡಿಸಿದ್ದು, ಎಲ್ಲರ ಗಮನ ಸೆಳೆಯಿತು. ಏಳು ದಿನಗಳ ಕಾಲ ಕಾಲೇಜಿನಲ್ಲಿ ವಿವಿಧ ಬಣ್ಣಗಳ ಸಂಪ್ರದಾಯಿಕ ಉಡುಪುಗಳನ್ನ ಧರಿಸಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂಭ್ರಮಿಸಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ವಿಜಯ ಭಾಸ್ಕರ್, ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಂಸ್ಕೃತಿ ಕ ಕಾರ್ಯಕ್ರಮಗಳ ಸಂಚಾಲಕ ಪ್ರೊ.ರಮೇಶ್ ಮಣ್ಣೆ, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸೈಯದ್ ಬಾಬು, ಎನ್ಸಿಸಿ, ಎನ್ಎಸ್ಎಸ್ ಸಂಚಾಲಕರಾದ ಪ್ರೊ.ಶ್ರೀನಿವಾಸ್ ಮೂರ್ತಿ, ವಿವಿಧ ವಿಭಾಗದ ಪ್ರಾಧ್ಯಾಪಕರುಗಳಾದ ಡಾ.ಮಹೇಶ್ ಕುಮಾರ್, ವಿನಯ್ ಕುಮಾರ್, ಡಾ.ರಂಗಸ್ವಾಮಿ, ಹರೀಶ್ ಕುಮಾರ್, ಮಹದೇವ ಮುಂಜಿ, ಶಿವಲಿಂಗಯ್ಯ, ಶಿಲ್ಪಾಶ್ರೀ, ಆಶಾ, ಶ್ರೀವಾಣಿ, ಹನುಮಂತರಾಯಪ್ಪ, ಶಾಜೀಯಾ, ಜೀಬಾಉನ್ನಿಸ್, ದಾಕ್ಷಾಯಾಣಿ, ಸುಪ್ರೀಯ, ವಿನೋದ, ಶ್ಯಾಮಲ, ಕಲ್ಪನಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.