ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.9 : ಜನ್ಮ ದಿನದ ನೆಪದಲ್ಲಿ ದುಂದು ವೆಚ್ಚಮಾಡುವುದಕ್ಕಿಂತ ಬಡವರು, ನಿರ್ಗತಿಕರು ಹಾಗೂ ನೊಂದವರಿಗೆ ಸಹಾಯ ಮಾಡಿದರೇ ಜೀವನಕ್ಕೊಂದು ಸಾರ್ಥಕತೆಸಿಗುತ್ತದೆ.
ದಾನ ಧರ್ಮದ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಮಾತಂಗ ಪೌಂಡೇಷನ್ ರಾಜ್ಯ ಉಪಾಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದರು.
ಹೊಸಕೋಟೆಯ ಕಾಟಂನಲ್ಲೂರು ಬಳಿಯಿರುವ ಅಭಯಾಶ್ರಮಕ್ಕೆ ಯುವ ನಾಯಕ ಹೆಚ್.ಟಿ ಸುಭಾಷ್ಗೌಡರ ಜನ್ಮ ದಿನದ ಅಂಗವಾಗಿ ದವಸ ಧಾನ್ಯ, ಆಶ್ರಯದ ಮಹಿಳೆಯರಿಗೆ ಉಚಿತವಾಗಿ ಬಟ್ಟೆಗಳನ್ನು ವಿತರಿಸಿ ಮಾತನಾಡಿದರು.
ಜನ್ಮದಿಂದ ನೆಪದಲ್ಲಿ ದುಂದು ವೆಚ್ಚ ಮಾಡದೆ ನೊಂದವರಿಗೆ ಸಹಾಯ ಮಾಡಬೇಕು. ಧೇಯ್ಯವನ್ನು ಬೆಳೆಸಿಕೊಂಡು ಬಂದಿದ್ದ, ಆಶ್ರಮಕ್ಕೆ ಅಗತ್ಯವಾಗಿರುವ ರಾಗಿ, ಗೋಧಿ, ಅಕ್ಕಿ ಇತ್ಯಾದಿ ಪದಾರ್ಥಗಳನ್ನು ದಾನ ನೀಡಿದ್ದೇವೆ.
ಸುಭಾಷ್ಗೌಡರು ಮುಂದಿನ ದಿನಗಳಲ್ಲಿ ಇಂಥ ಆಶ್ರಮಗಳನ್ನು ಗುರ್ತಿಸಿ ಬಡವರಿಗೆ, ನೊಂದವರಿಗೆ ಸಹಾಯ ಮಾಡಬೇಕು. ದೇಶದಲ್ಲಿ ಮೂರು ಹೊತ್ತು ಊಟ ಮಾಡುವವರೂ ಶೇ.80 ರಷ್ಟಿದ್ದಾರೆ. ಇನ್ನೂಳಿದವರು ಬಡವರು, ಕೂಲಿಕಾರರಾಗಿದ್ದಾರೆ. ಆರ್ಥಿಕವಾಗಿ ಉಳ್ಳವರು ಇಂಥ ಆಶ್ರಮಗಳನ್ನು ಗುರುತಿಸಿ ಅಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡಬೇಕು ಎಂದು ಸುಬ್ಬರಾಜ್ ಹೇಳಿದರು.
ಇದೇ ವೇಳೆ ಹೆಚ್.ಟಿ ಸುಭಾಷ್ಗೌಡ ಮಾತನಾಡಿ, ಆಶ್ರಯದಲ್ಲಿ ಬಡವರಿಗೆ ಸಹಾಯ ಮಾಡಿ ಜನ್ಮದಿನ ಆಚರಣೆ ಮಾಡಿಕೊಂಡಿರುವುದು ಸಂತಸ ತಂದಿದೆ. ಜೀವನದಲ್ಲಿ ನೊಂದವರಿಗೆ ಸಹಾಯ ಮಾಡುವುದು ಪುಣ್ಯದ ಕೆಲಸ. ಜೀವನ ಸಾರ್ಥಕತೆಗೊಳ್ಳಲು ಇತರರಿಗೆ ಸಹಾಯ ಮಾಡುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಿದೆ ಎಂದರು.
ಮುಖಂಡರಾದ ತ್ಯಾಗರಾಜ್, ಉದ್ಯಮಿ ಬೈರೇಗೌಡರು,ಸುದರ್ಶನ್, ಸುರೇಶ್, ಸೋಮ ಮೊದಲಾದವರು ಹಾಜರಿದರು.