ಹೊಸಕೋಟೆ, ಆ. 9 : ತಾಲೂಕಿನ ನೆಲವಾಗಿಲು ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ವಸಂತ ಲೋಕೇಶ್, ಉಪಾಧ್ಯಕ್ಷರಾಗಿ ರವಿ ಅವಿರೋಧವಾಗಿ ಅಯ್ಕೆಯಾದರು.
ಎರಡನೇ ಅವಧಿಗೆ ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ ಅಧ್ಯಕ್ಷ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲು ಪ್ರಕಟವಾಗಿತ್ತು. ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಎಲ್ಲಾ ಸದಸ್ಯರು ಪರಸ್ಪರ ಚರ್ಚೆ ನಡೆಸಿ ಎಲ್ಲರ ಒಪ್ಪಿಗೆ ಮೇರೆಗೆ ನಿಗದಿತ ಸಮಯಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿ.ಎಲ್.ಸತೀಶ್ಘೋಷಿಸಿದರು.
ನೂತನ ಅಧ್ಯಕ್ಷೆ ವಸಂತ ಲೋಕೇಶ್ ಮಾತನಾಡಿ, ನಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರದಿಂದ ಬರುವ ಅನುದಾನಗಳ ಜೊತೆಗೆ ಪಂಚಾಯಿತಿ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಗ್ರಾಮಾಭಿವೃದ್ಧಿ ಮಾಡಲಾಗುವುದು ಎಂದರು.
ನೂತನವಾಗಿ ಅಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷರನ್ನು ತಾಲೂಕು ಶಾಸಕ ಶರತ್ ಬಚ್ಚೇಗೌಡ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ. ಮಾಜಿ ಅಧ್ಯಕ್ಷೆ ಸವಿತಾಗೋಪಾಲ್, ತಾಪಂನ ಮಾಜಿ ಸದಸ್ಯ ಬೀರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ನೆಲವಾಗಿಲು ಎಸ್ಎಫ್ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ಮಾಜಿ ಅಧ್ಯಕ್ಷರಾ ನಾರಾಯಣಗೌಡ, ಶ್ರೀನಿವಾಸ್, ಎಸ್ಬಿಟಿ ಬೈರೇಗೌಡ, ನಿರ್ದೇಶಕರಾದ ಎನ್.ಡಿ.ರಮೇಶ್, ಎ.ಆರ್. ಕೃಷ್ಣಪ್ಪ, ಪಿಡಿಒ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಪದ್ಮಾನಾಗೇಶ್, ವಿ. ರುಕ್ಮಿಣಿಮಂಜುನಾಥ್, ಉಪಾಧ್ಯಕ್ಷರಾದ ಸೊಣ್ಣೇಗೌಡ ಮಧುಸೂದನ್ ಗ್ರಾಪಂ ಸದಸ್ಯರಾದ ವೆಂಕಟರಾಜು, ಮುನಿರತ್ನಮ್ಮ, ಸುಮಾ, ಕವಿತಾ, ಗೋಪಾಲಪ್ಪ, ಸತೀಶ್, ಆಶಾ, ಮಾಲಾ, ಮಹೇಶ್, ಮಂಜುಳ, ಶಿಲ್ಪಶ್ರೀ,ಸುರೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.