ಸುದ್ದಿಮೂಲ ವಾರ್ತೆ
ಮೈಸೂರು, ಆ.9 : ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಮೈಸೂರು ನಗರಕ್ಕೆ ಸಿಐಡಿ ತಂಡ ಬುಧವಾರ ಆಗಮಿಸಿ, ದಾಖಲೆಗಳನ್ನು ಪಡೆದುಕೊಂಡಿದೆ.
ಸಿಐಡಿ ಐಜಿ ಪ್ರವೀಣ್ ಪವಾರ್ ಮಧುಕರ್ ನೇತೃತ್ವದ ಸಿಐಡಿ ತಂಡ ತನಿಖೆ ನಡೆಸುತ್ತಿದ್ದು, ಸಿಐಡಿ ತಂಡದ ಜೊತೆ ಮಂಡ್ಯ ಎಸ್ಪಿ ಯತೀಶ್ , ಮೈಸೂರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಛೇರಿಗೆ ಆಗಮಿಸಿ ಭೇಟಿ ನೀಡಿ ಸತತ ಒಂದು ಗಂಟೆಗಳ ಕಾಲ ಮಾಹಿತಿ ಸಂಗ್ರಹಿಸಿದರು.
ಜು.14 ಮೈಸೂರಿಂದ ರವಾನೆ
ಜು. 14 ರಂದು ಇಲ್ಲಿನ ಸರಸ್ವತಿಪುರಂ ಅಂಚೆ ಕಛೇರಿಯಿಂದ ರಾಜಭವನಕ್ಕೆ ಪತ್ರ ರವಾನೆ ಆಗಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ದಾಖಲೆಗಳನ್ನು ತೆಗೆದುಕೊಂಡಿದೆ. ಮತ್ತಷ್ಟು ದಾಖಲೆಗಳನ್ನ ಒದಗಿಸುವಂತೆ ಅಂಚೆ ಕಛೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.