ಸುದ್ದಿಮೂಲ ವಾರ್ತೆ
ಆ,10:ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಆರೋಗ್ಯವೇ ಬಹುದೊಡ್ಡ ಸಂಪತ್ತಾಗಿದೆ ಎಂದು ಇಂಡ್ಲವಾಡಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಹೇಳಿದರು.
ಇಂಗ್ಲವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಕಾಯಿಲೆ ಬಂದು ಪೀಡಿಸುತ್ತಿರುವ ಸಂದರ್ಭದಲ್ಲಿ ಇಂತಹ ಲಸಿಕೆಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವೂ ಇದಕ್ಕಾಗಿ ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿವೆ ಜನರು ಸರಿಯಾಗಿ ಬಳಸಿಕೊಂಡು ಆರೋಗ್ಯವಂತರಾಗಬೇಕು ಎಂದು ಕರೆ ನೀಡಿದರು.
ಹೆಚ್ಚು ಹೆಚ್ಚು ನಗರೀಕರಣಗಳು ಆಗುತ್ತಿರುವ ಪರಿಣಾಮ ಗಾಳಿ ನೀರು ಮಣ್ಣು ಆಹಾರ ಕಲುಷಿತಗೊಂಡು ಹೊಸ ಹೊಸ ಕಾಯಿಲೆಗಳು ಉಲ್ಬನ ಆಗುತ್ತಿವೆ ಇದನ್ನು ತಡೆಗಟ್ಟಲು ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರು ಮನುಷ್ಯನ ಸಹಕಾರವಿಲ್ಲದೆ ಪರಿಪೂರ್ಣವಾಗುವುದಿಲ್ಲ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರಾದ ಮಹಾಲಕ್ಷ್ಮಿ ಮಾತನಾಡಿ ಸಮಾಜವನ್ನು ಕಟ್ಟುವ ಹೆಣ್ಣು ಜಾಗೃತಳಾಗಬೇಕಾಗಿದೆ ತನ್ನ ಆರೋಗ್ಯವನ್ನು ನೋಡಿಕೊಂಡು ಮಗುವನ್ನು ಬೆಳೆಸಿ ದೇಶದ ಮುಂದಿನ ಭವಿಷ್ಯಕ್ಕಾಗಿ ಕೊಡುಗೆಯಾಗಿ ನೀಡುವಂಥವಳಾಗಬೇಕು ಆಗಲೇ ಸುಸ್ಥಿರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ನರ್ಸ್ ಮುನಿರತ್ನ ಮಾತಾಡಿ ಆರೋಗ್ಯ ಸಿಬ್ಬಂದಿಯು ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಮಾನವ ಕಲ್ಯಾಣವನ್ನ ಬಯಸುತ್ತಾರೆ ಇದನ್ನು ಸದುಪಯೋಗಪಡಿಸಿಕೊಂಡು ಎಲ್ಲರೂ ಆರೋಗ್ಯವಂತರಾಗಬೇಕು ಇದೊಂದೇ ನಮ್ಮ ಮಹಾದಾಸಯಾಗಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಅಣ್ಣಯ್ಯ ಕನ್ನಯ್ಯ ಕುಮಾರ್ ಆಶಾ ಕಾರ್ಯಕರ್ತರಾದ ರಾಧ ಹೇಮಲತಾ ಲಕ್ಷ್ಮಿ ಮಹಾದೇವಿ ಮಂಜುಳಾ ವಸಂತ ಚಂದ್ರಕಲಾ ಸಂಧ್ಯಾ ಇತರರಿದ್ದರು.