ಬೆಂಗಳೂರು, ಆ.10 : ಇಂದಿನ ಯುವ ಪೀಳಿಗೆ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಕರೆ ನೀಡಿದರು.
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕರ್ನಾಟಕ ರೈತರ ಜಾಗೃತಿ ವೇದಿಕೆ ಮತ್ತು ಇಪ್ಕೋ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಮ್ಮ ಊರು ನಮ್ಮ ಪರಿಸರ ಎಂಬ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಿಸ್ತು ಎಂದರೆ ನಮ್ಮ ಪ್ರತಿದಿನದ ದೈನಂದಿಕ ಕೆಲಸಗಳಲ್ಲಿಯೂ ನಾವು ಭಾಗಿಯಾಗಿ ನಮ್ಮ ಸ್ವಂತ ಶೌಚಾಲಯವನ್ನು ನಾವೇ ಸ್ವಚ್ಛಗೊಸಿಕೊಳ್ಳಬೇಕು ತಿಳಿಸಿದರು.
ಬಡತನದ ರೇಖೆಯಲ್ಲಿ ಬೆಳೆದ ನಾವು ಕೃಷಿ, ಉಪಕಸುಬುಗಳಾದ ಮೇಕೆ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆ, ಹಂದಿ ಸಾಕಣೆಯಂತಹ ಕಸುಬುಗಳಲ್ಲೂ ತೊಡಗಿಸಿಕೊಂಡಿದ್ದನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಅವರು ಆಳ್ವಾಸ್ ವಿದ್ಯಾಸಂಸ್ಥೆಯ ಸೌಜನ್ಯ ಎಂಬ ವಿದ್ಯಾರ್ಥಿಯು ತನ್ನ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದಿದ್ದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸುಮಾರು ಎರಡು ದಶಕಗಳ ಹಿಂದೆ ಪುಣೆಯಲ್ಲಿ ಶುಭಾಷ್ ಪಾಳೇಕರ್ ರವರ ಜೊತೆ ತಮ್ಮ ಸಾವಯವ ಕೃಷಿಯ ಅನುಭವಗಳನ್ನು ಹಂಚಿಕೊಂಡರು.
ಕೋಲಾರ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷೆ ರಾಧಾ ಮಾತಾನಾಡಿ, ಕೋಲಾರ ಜಿಲ್ಲೆಯು ಇಡೀ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಟಮೋಟ ಉತ್ಪಾದನೆಯನ್ನು ಮಾಡುವ ಜಿಲ್ಲೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ವೈರಸ್ ಗಳಿಗೆ ತತ್ತರಿಸಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಪಡೆಯಲಾಗುತ್ತಿದೆ. ಎಂದರು.
ಮಣ್ಣಿನ ಆರೋಗ್ಯ ದಿನೇ ದಿನೇ ಕ್ಷಿಣಿಸಿ, ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಂಪೂರ್ಣವಾಗಿ ನಶಿಸಿಹೋಗುವೆ. ಇದರಿಂದ ಅಧಿಕ ಇಳುವರಿಗೆ ಹೆಚ್ಚಿನ ರಾಸಾಯನಿಕಗಳ ಮೊರೆ ಹೋಗುತ್ತಿದ್ದೇವೆ. ಇದರಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿಸಿದರು.
ಇಫ್ಫ್ಕೋ ಸಂಸ್ಥೆಯ ವ್ಯವಸ್ಥಾಪಕ ಬಿ ಚೇತನ್, ಕೇಂದ್ರ ಸರ್ಕಾರ ರಾಸಾಯನಿಕ ರಸಗೊಬ್ಬರಗಳ ಮೇಲೆ ಸುಮಾರು 3 ಲಕ್ಷ ಕೋಟಿಗಳಷ್ಟು ಸಬ್ಸಿಡಿಯನ್ನು ವ್ಯಯಿಸುತ್ತಿದೆ. ಯೂರಿಯಾ ರಸಗೊಬ್ಬರಕ್ಕೆ ಪ್ರತಿ ಚೀಲದ ಮೇಲೆ ಕೇಂದ್ರ ಸರ್ಕಾರ ಸುಮಾರು 2,500 ರೂ ಗಳನ್ನು ಸಬ್ಸಿಡಿ ನೀಡುತ್ತಿದೆ, ಆದರೆ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಣ್ಣಿನ ಸವಕಳಿ ಹೆಚ್ಚುತ್ತಿತ್ತು. ಮಣ್ಣಿನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ ಇದಕ್ಕೆಲ್ಲ ಪರ್ಯಾಯವಾಗಿ ಇತ್ತೀಚೆಗೆ ಭಾರತದ ಯುವ ವಿಜ್ಞಾನಿಗಳು ಆವಿಷ್ಕರಿಸಿರುವ ನ್ಯಾನೋ ಯೂರಿಯಾದ ಮೊರೆ ಹೋಗಲು ತಿಳಿಸಿದರು.