ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.10: ಭಾರತ ಬಿಟ್ಟು ತೊಲಗಿ ಚಳುವಳಿ ದಿನ ಅಂಗವಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲ ಮಂದಿರ ಮಕ್ಕಳಿಂದ ಗೀತ ವಾಚನ ದೀಪಿಕಾ ಶ್ರೀಕಾಂತ್ ರವರಿಂದ ವೈಷ್ಣವ ಜನತೋ ಹಡ್ಸನ್ ಚರ್ಚಿನ ಫಾದರ್ ರೆವೆರ್ ಎಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ ಗುರುದ್ವಾರದ ಗುರು ಸಿಂಗ್ ಸಭಾ ಮತ್ತು ತಂಡದವರಿಂದ ಗುರು ಗ್ರಂಥ ವಾಚನ ಮೌಲ್ವಿ ಅಫೀಜ್ ಸಾಬೀರ್ ಹುಸೇನ್ ರಿಂದ ಖುರಾನಿನ ವಾಚನ ಮಾಡಲಾಯಿತು.
ಈ ವೇಳೆ ವಿಶೇಷ ಆಯುಕ್ತ ಹರೀಶ್ ಕುಮಾರ್ ಉಪ ಆಯುಕ್ತ ಮಂಜುನಾಥ್ ಸ್ವಾಮಿ ವಲಯ ಜಂಟಿ ಆಯುಕ್ತ ಪಲ್ಲವಿ ಮಾಜಿ ಸಚಿವ ರಾಮಚಂದ್ರಗೌಡ ಮಾಜಿ ಮೇಯರ್ ಜೆ ಹುಚ್ಚಪ್ಪ ಎಂ ರಾಮಚಂದ್ರಪ್ಪ ಎಸ್ ಕೆ ನಟರಾಜ್ ಡಿ ವೆಂಕಟೇಶ್ ಮೂರ್ತಿ ಬಿ ಎಸ್ ಸತ್ಯನಾರಾಯಣ ಇತರರು ಇದ್ದರು