ಸುದ್ದಿಮೂಲ ವಾರ್ತೆ
ಬೇತಮಂಗಲ,ಆ.10: ಕೆಜಿಎಫ್ ತಾಲ್ಲೂಕಿನಲ್ಲಿಯೇ 27 ಸದಸ್ಯರ ಸಂಖ್ಯಾ ಬಲದ ಮೂಲಕ ದೊಡ್ಡ ಗ್ರಾಪಂಯಾಗಿರುವ ಬೇತಮಂಗಲ ಗ್ರಾಪಂಗೆ ಜಿದ್ದಾಜಿದ್ದಿನ ನಡುವೆ ಸ್ವಾತಂತ್ರ್ಯ ಅಭ್ಯರ್ಥಿಯಾದ ವಿನೂ ಕಾರ್ತಿಕ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಅನುಸೂಯಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬೇತಮಂಗಲ ಗ್ರಾಪಂಗೆ ಸುಮಾರು 20 ವರ್ಷಗಳ ನಂತರ ಸಾಮಾನ್ಯ ವರ್ಗದ ಮೀಸಲಾತಿ ಬಂದಿದ್ದು, ಒಟ್ಟು 27 ಸದಸ್ಯರ ಪೈಕಿ 17 ಸದಸ್ಯರು ಕಾಂಗ್ರೆಸ್ ಪಕ್ಷದ ಗುಂಪಿನಲ್ಲಿ ಗುರುತಿಸಿಕೊಂಡಿದರು, ಈ ಭಾರಿ ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಅಧ್ಯಕ್ಷರಾಗಿ ಆಯ್ಕೆಯಾಗಬಹುದು ಎಂಬ ಕನಸು ಕಟ್ಟಿಕೊಂಡಿದ್ದ ಶಾಸಕಿ ರೂಪಕಲಾ ಶಶಿಧರ್ ಮುಖಭಂಗವಾಗಿದೆ.
ವಿನೂ ಕಾರ್ತಿಕ್ಗೆ 17, ರೇಣುಕಾಮ್ಮಗೆ 10 ಮತಗಳು: ಕಾಂಗ್ರೆಸ್ ಪಕ್ಷದ ಬೆಂಬಲಿತ ಗುಂಪಿನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಥಿಸಿದ್ದ ರೇಣುಕಾಮ್ಮ 10 ಮತಗಳು ಪಡೆದುಕೊಂಡರೆ, ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ವರ್ಥಿಸಿದ್ದ ವಿನೂ ಕಾರ್ತಿಕ್ 17 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಹಿನ್ನಲೆ ಬಿಜೆಪಿ ಬೆಂಬಲಿತ ಅಲುವೇಲಮ್ಮ ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂ ನೂತನ ಅಧ್ಯಕ್ಷ ವಿನೂ ಕಾರ್ತಿಕ್ ಮಾತನಾಡಿ, ಬೇತಮಂಗಲ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಅಭಿಮಾನಕ್ಕಾಗಿ ಸರ್ವ ಸದಸ್ಯರು ಪಕ್ಷಾತೀತವಾಗಿ ಬೆಂಬಲ ನೀಡಿ, ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ, ಎಲ್ಲಾ ಸದಸ್ಯರ ವಿಶ್ವಾಸದ ಮೂಲಕ ಅಭಿವೃದ್ದಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಮಮತ ಗಣೇಶ್, ರಾಧಮ್ಮ ಉದಯ್ ಕುಮಾರ್, ಜಿಪಂ ಮಾಜಿ ಸದಸ್ಯ ನಿರ್ಮಾಲ ಅಮರೇಶ್, ಮುಖಂಡರಾದ ಶ್ರೀಹರಿ, ಡೈರಿ ಅಪ್ಪಿ, ರಮೇಶ್, ಅಕಿಲ್, ವೆಂಕಟೇಶ್, ಓಂ ಸುರೇಶ್, ಮೂರ್ತಿ, ಗಣೇಶ್, ಶ್ರೀನಿವಾಸ್, ಡೈರಿ ಅನಂದ್ ಸೇರಿದಂತೆ ನೂರಾರೂ ಮಂದಿ ಭಾಗವಹಿಸಿದ್ದರು.