ಸುದ್ದಿಮೂಲ ವಾರ್ತೆ
ತುಮಕೂರು,ಆ.11: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತುಮಕೂರು ತಾಲೂಕಿನ ಹೆಬ್ಬೂರು ವಲಯದ ಹೆಬ್ಬೂರು `ಎ` ಕಾರ್ಯಕ್ಷೇತ್ರದ ನಾರಾಯಣ ಕೆರೆ ಗ್ರಾಮದಲ್ಲಿ ಚೆನ್ನಕೇಶವ ದೇವಾಲಯದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಸುನೀತಾ ಪ್ರಭು ಉಪಸ್ಥಿತರಿದ್ದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಮಾಡುವ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ಅರುಣ್ ಕುಮಾರ್ ಸೇವಾ ಪ್ರತಿನಿಧಿ ಮೋಸಿನಾ ಒಕ್ಕೂಟದ ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.