ಸುದ್ದಿಮೂಲವಾರ್ತೆ
ಕೊಪ್ಪಳ ಆ 12: ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಾಪುರ, ಬಂಡಿಹರ್ಲಾಪುರಾ, ಶಿವಪುರ, ಅಗಳಕೇರಾ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ದೇವಸ್ಥಾನ, ಮನೆ, ಅಂಗಡಿಗಳು ಎನ್ನದೆ ಕಳ್ಳರು ದೋಚುತ್ತಿದ್ದಾರೆ. ಆದ್ರೆ ಕಳ್ಳರನ್ನು ಬಂಧಿಸುವಲ್ಲಿ ಕೊಪ್ಪಳ ಮುನಿರಾಬಾದ್ ಪೊಲೀಸರು ವಿಫಲರಾಗಿದ್ದಾರೆಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಕಳ್ಳರ ಹಾವಳಿಯಿಂದ ಮುಕ್ತಿಕೊಡಿ ಎಂದು ಎಸ್ಪಿಗೆ ಮನವಿ ಮಾಡಿದ್ದಾರೆ.
ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ವಾರಗಳಲ್ಲಿ 4 ಕಳ್ಳತನ ಪ್ರಕರಣಗಳು ಜರುಗಿವೆ. ಮನೆ, ದೇವಸ್ಥಾನ. ಅಂಗಡಿ ಬೀಗ ಮುರಿದು ಹಣ, ಬಂಗಾರ ದೋಚಿದರೆ, ದೇವಸ್ಥಾನದ ದರ್ಶನಕ್ಕೆ ಬಂದ ಭಕ್ತರ ಚಿನ್ನದ ಚೈನ್ ಖದೀಮರು ಎಗರಿಸಿದ್ದಾರೆ. ಹಳೇ ಲಿಂಗಾಪುರ ನಿವಾಸಿ ಹಾಗೂ ಮಾಜಿ ಸೈನಿಕ ಭೀಮಪ್ಪ ಎನ್ನುವವರ ಮನೆಯನ್ನು ಕಳ್ಳರು ದೋಚಿದ್ದಾರೆ. ಜುಲೈ, 15, .2023 ರಂದು ಮಾಜಿ ಸೈನಿಕ ಭೀಮಪ್ಪ ತಮ್ಮ ಕುಟುಂಬದೊಂದಿಗೆ ಮನೆ ಬೀಗ ಹಾಕಿ ಕೊಪ್ಪಳದ ಬನ್ನಿಕೊಪ್ಪದ ತಮ್ಮೂರು ಜಾತ್ರೆಗೆ ಹೋಗಿದ್ದಾರೆ. ಈ ವೇಳೆ ಮನೆಗೆ ಕನ್ನಹಾಕಿದ ಕಳ್ಳರು ಮನೆ ಬೀಗ ಮುರಿದು
ಮನೆಯಲ್ಲಿದ್ದ ಗಟ್ಟಿ ಬಂಗಾರ, ಬಂಗಾರ ಚೈನ್, ಬ್ರಾಸ್ ಲೈಟ್, ಕಿವಿ ಓಲೆ ಸೇರಿದಂದ ಒಟ್ಟು 3ಲಕ್ಷ 32ಸಾವಿರ ಬೆಲೆ ಬಾಳುವ ಬಂಗಾರ ಹಣ ದೋಚಿದ್ದಾರೆ. ಇದರ ಬೆನ್ನೆಲ್ಲೆ ಕಳೆದ ಮಂಗಳವಾರ ಹುಣ್ಣಿಮೆ ದಿನ ಹುಲಿಗೆಮ್ಮ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಮಹಿಳೆಯ ಸುಮಾರು 4 ತೊಲೆ ಚಿನ್ನ ಕದ್ದು ಕಳ್ಳರು ಪರಾರಿಯಾದ ಪ್ರಕರಣ ಜರುಗಿದೆ. ಇದೀಗ ಮುನಿರಾಬಾದ್ ಆರ್ ಎಸ್ ಹುಲಿಗಿಯಲ್ಲಿ ಬಾರ್ ವೊಂದರಲ್ಲಿ ಖದೀಮರು ಕನ್ನಹಾಕಿದ್ದಾರೆ. ಮಾಸ್ಕ್ ಹಾಕಿದ ವ್ಯಕ್ತಿ ಬಾರ್ ಗೆ ನುಗ್ಗಿ ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಹಣ ಇರದ ಕಾರಣ 8 ಬಿಯರ್ ಬಾಟಲಿ ಕದ್ದು ಪರಾರಿಯಾಗಿದ್ದಾನೆ. ಮೊನ್ನೆ ಬೆಳ್ಳಂ ಬೆಳಿಗ್ಗೆ
ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಐತಿಹಾಸಿಕ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಭಕ್ತರ ಕಾಣಿಕೆಯ ಹುಂಡಿಯನ್ನು ಕಳ್ಳರು ದೋಚಿದ್ದಾರೆ. ಈ ಕುರಿತು ಎಸ್ಪಿ ಯಶೋಧಾ ವಂಟಗೋಡಿ ಅವರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ಮಾಜಿ ಸೈನಿಕರ ತಂಡ ದೂರು ನೀಡಿದೆ ಆದ್ರೆ ಕಳ್ಳರು ಮಾತ್ರ ಪೊಲೀಸರ ಕೈಗೆ ಸಿಗುತ್ತಿಲ್ಲ. ಒಟ್ಟಾರೆ ಶಿವಪುರ, ಹುಲಿಗಿ, ಲಿಂಗಾಪುರ, ಬಂಡಿಹರ್ಲಾಪುರಾ, ಅಗಳಕೇರಾ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಳವಾಗುತ್ತಿದ್ದು ಇದು ಮುನಿರಾಬಾದ್ ಪೊಲೀಸರ ವೈಫಲ್ಯ ಎನ್ನಲಾಗುತ್ತಿದೆ.
ಬೈಟ್: ಚಂದ್ರಶೇಖರಯ್ಯ. ಮಾರ್ಕಂಡೆಯ ಗುಡಿಯ ಪುಜಾರಿಗೌರಮ್ಮ, ಬಂಗಾರ ಕಳೆದುಕೊಂಡವರು ಭಕ್ತ ಕೊಪ್ಪಳ ದೇವಸ್ಥಾನಗಳಲ್ಲಿ ಕನ್ನ ಹಾಕುವ ಖದೀಮರು ಹುಲಿಗಿ ಭಾಗದಲ್ಲಿ ಜನರ ನಿದ್ದೆಗೆಡಿಸಿದ ಕಳ್ಳರು ಕಳೆದ ಮೂರು ವಾರಗಳಲ್ಲಿ ನಾಲ್ಕು ಕಡೆ ಕಳ್ಳತನ ಹಳೆಲಿಂಗಾಪುರದಲ್ಲಿ ಮಾಜಿ ಸೈನಿಕ ಭೀಮಪ್ಪ ಮುನಿರಾಬಾದ್ ರೈಲು ನಿಲ್ದಾಣ ಬಳಿಯಲ್ಲಿ ಅಂಗಡಿ ಶಿವಪುರದಲ್ಲಿಯ ಶ್ರೀಮಾರ್ಕಂಡೆಯ ಗುಡಿಹುಲಿಗಿಗೆ ಬಂದ ಭಕ್ತರೊಬ್ಬರ ಚೈನು ಸುಮಾರು 3.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ವರದಿಯಾಗದೆ ಅದೆಷ್ಟೊ ಪ್ರಕರಣಗಳಿವೆ ಕಳ್ಳತನ ತಡೆಯಲು ಮುನಿರಾಬಾದ್ ಪೊಲೀಸರ ವೈಫಲ್ಯ ದೇವಸ್ಥಾನಕ್ಕೆ ಬರುವ ಭಕ್ತರು ಹಣ ಕಳೆದುಕೊಂಡು ಗೋಳಾಡುತ್ತಿದ್ದಾರೆ ನಿಗಾವಹಿಸಬೇಕಾದ ಪೊಲೀಸರು ನಿರ್ಲಕ್ಷ್ಯ ಆರೋಪ ಕೇಳಿ ಬರುತ್ತಿದೆ.