ಸುದ್ದಿಮೂಲ ವಾರ್ತೆ
ಬೆಂಗಳೂರು, ಆ, 14: ಹಿರಿಯ ಐಪಿಎಸ್ ಅಧಿಕಾರಿಗಳಾದ ಸಿಮಂತ್ ಕುಮಾರ್ ಸಿಂಗ್, ಸಂದೀಪ್ ಪಾಟೀಲ್ ಸೇರಿದಂತೆ ಕರ್ನಾಟಕ ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ 954 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಒಂದು ರಾಷ್ಟ್ರಪತಿ ಶೌರ್ಯ ಪ್ರಶಸ್ತಿ, 229 ಶೌರ್ಯ ಪೊಲೀಸ್ ಪದಕ, 82 ರಾಷ್ಟ್ರಪತಿ ವಿಶಿಷ್ಟ ಸೇವಾ ಪೊಲೀಸ್ ಪದಕ ಹಾಗೂ ಶ್ಲಾಘನಾರ್ಹ ಸೇವೆಗೆ 642 ಪೊಲೀಸ್ ಪದಕಗಳನ್ನು ಪ್ರಕಟಿಸಲಾಗಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಸಿಸ್ಟೆಂಟ್ ಕಮಾಂಡಂಟ್ ಲೌಕ್ರಾಕ್ ಪಾಮ್ ಇಬೊ-ಮ್- ಚಾ ಸಿಂಗ್ ರಾಷ್ಟ್ರಪತಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ವಿಶಿಷ್ಟ ಸೇವಾ ಪೊಲೀಸ್ ಪದಕಕ್ಕೆ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಗಳಾದ ಸೀಮಂತ್ ಕುಮಾರ್ ಸಿಂಗ್, ಎಸ್.ಮುರುಗನ್ ಆಯ್ಕೆಯಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ ಅಧಿಕಾರಿಗಳಾದ ಸಂದೀಪ್ ಪಾಟೀಲ್, ರಾಘವೇಂದ್ರ ಕೆ. ಹೆಗಡೆ, ಬಿ.ಎಸ್.ಮೋಹನ್ ಕುಮಾರ್, ಜಿ. ನಾಗರಾಜ್, ಎಂ.ಶಿವಶಂಕರ್, ಜಿ. ಕೇಶವ ಮೂರ್ತಿ, ಎಚ್.ಎಸ್. ಜಗದೀಶ್,ಎಂ.ಎನ್. ನಾಗರಾಜ, ಬಿ. ಗಿರೀಶ್, ಬಿ.ಎನ್. ಶ್ರೀನಿವಾಸ್, ಅಂಜುಮಾಲಾ ಟಿ. ನಾಯ್ಕ್, ಆರ್. ಪಿ. ಅಶೋಕ್, ಅನಿಲ್ ಕುಮಾರ್ ಪಿ. ಗ್ರಾಂಪುರೋಹಿತ್, ರಾಮಪ್ಪ ಬಿ. ಗುತ್ತೇರ್, ವಿ. ಬಂಗಾರು, ಶಂಕರ, ಕೆ. ವೆಂಕಟೇಶ್, ಎಸ್. ಕುಮಾರ್ ಅವರು ಭಾಜನರಾಗಿದ್ದಾರೆ.