ಸುದ್ದಿಮೂಲ ವಾರ್ತೆ
ಕೆಜಿಎಫ್, ಆ.18: ಬೇತಮಂಗಲ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನೂತನ ಗ್ರಾಪಂ ಅಧ್ಯಕ್ಷರಾಗಿ ವಿನೂ ಕಾರ್ತಿಕ್ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಪಂ ಒಂದನೇ ಅವಧಿ ಪೂರ್ಣಗೊಂಡು ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಭೇದ ಇಲ್ಲದೆ ಎಲ್ಲಾ ಸದಸ್ಯರು ಮತ ನೀಡಿ ಜಯಶೀಲರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಾಭಿವೃದ್ದಿ ಕಡೆ ಗಮನಹರಿಸಿ ಪಂಚಾಯಿತಿಯನ್ನು ಅಭಿವೃದ್ದಿ ಮಾಡವುದೇ ನನ್ನ ಗುರಿ. ಯಾವುದೇ ರೀತಿಯ ಭೇದಭಾವ ತೋರದೆ ಜನರ ಪರ ನಿಂತು ಕೆಲಸ ಮಾಡುತ್ತೇನೆ ಎಂದು ವ್ಯಕ್ತಪಡಿಸಿದರು.
ಗಣ್ಯರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಬೆಳಗಿನ ಉಪಹಾರವನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಪಂಚಾಯಿತಿಯ ಸದಸ್ಯರಿಗೂ ಮತ್ತು ಗಣ್ಯರಿಗೂ ಹಾಗೂ ಪತ್ರಕರ್ತರಿಗೆ, ಪಂಚಾಯಿತಿಯ ಆಡಳಿತ ಸಿಬ್ಬಂದಿ ವರ್ಗದವರಿಗೂ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಿರ್ಮಲ ಅಂಬರೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅದ್ಯಕ್ಷ ಶ್ರೀಹರಿ, ಗ್ರಾಪಂ ಮಾಜಿ ಅಧ್ಯಕ್ಷ ಮಮತಾ ಗಣೇಶ್, ಹಿನಾಯತ್ ಉಲ್ಲಾ ಯುವಮುಖಂಡ ವಿಕ್ಕಿರೆಡ್ಡಿ, ಮತ್ತು ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.