ಸುದ್ದಿಮೂಲವಾರ್ತೆ
ಕೊಪ್ಪಳ ಆ 19:ಬಿಜೆಪಿ ಹೈಕಮಾಂಡ ಅಸ್ತಿತ್ವ ಕಳೆದುಕೊಂಡಿದೆ. ಬಿಜೆಪಿಯ ಹಿರಿಯ ಮುಖಂಡರು ಈಗ ಅಸಮಾದಾನಗೊಂಡು ಕಾಂಗ್ರೆಸ್ ನತ್ತ ಬರುತ್ತಿದ್ದಾರೆ ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಕೊಪ್ಪಳ ತಾಲೂಕು ಯತ್ನಟ್ಟಿ ಗ್ರಾಮದಲ್ಲಿ ಮಾತನಾಡಿ ಹಿರಿಯ ಬಿಜೆಪಿ ಮುಖಂಡರು ಅಸಮಧಾನ ವ್ಯಕ್ತಪಡಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಹೈಕಮಾಂಡ್ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೆಜಾರಿಟಿಗೆ ಬರೋದಿಲ್ಲ ಅನ್ನುವ ಭಾವ ಬಿಜೆಪಿ ಮುಖಂಡರಲ್ಲಿ ಬಂದಿರಬಹುದು ಎಂದರು.
ಈಗಾಗಲೇ ಕಾಂಗ್ರೆಸ್ನಿಂದ ಹೋಗಿರುವವರು, ಬಿಜೆಪಿ ಪಕ್ಷದವರು, ಪಕ್ಷಾಂತರಿಗಳು ಇರಬಹುದು ಅವರು ಕಾಂಗ್ರೆಸ್ಗೆ ವಾಪಾಸ್ ಬರುವ ಚಿಂತನೆ ಮಾಡಿದ್ದಾರೆ ಎಂದು ಭಾವಿಸಿದ್ದೇನೆ. ಈ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಸುಮ್ಮನೆ ಪಾಸಿಟಿವ್ ಇಲ್ಲ. ಬಿಜೆಪಿಯವರು ಸಂಪರ್ಕ ಮಾಡಿದ್ದರಿಂದ ಇದರ ಮೇಲೆ ನಮ್ಮ ಪಕ್ಷ ಪಾಸಿಟಿವ್ ಇದೆ ಎಂದರು.
ಗ್ಯಾರಂಟಿ ಯೋಜನೆ ಕೇವಲ ರಾಜ್ಯದಲ್ಲಿ ಅಲ್ಲ, ದೇಶಾದ್ಯಂತ ಜನರಿಗೆ ಮನಮುಟ್ಟಿದೆ. ರಾಜ್ಯದಲ್ಲಿ ಈಗಾಗಲೇ ೪೧ ಕೋಟಿ ಜನ ಮಹಿಳಾ ಪ್ರಯಾಣಿಕರು ರಾಜ್ಯದಲ್ಲಿ ಫ್ರಿ ಪ್ರಯಾಣಿಸಿದ್ದಾರೆ. ಇದೊಂದು ಇತಿಹಾಸ. ಬೇರೆ ರಾಜ್ಯದಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಮುಖಂಡರಿಗೆ ಈ ಶ್ರೇಯಸ್ಸು ಸಲ್ಲುತ್ತದೆ. ನಾನು ಈ ಹಿಂದೆಯೇ ಹೇಳಿದ್ದೆ
ಈಗ ಪಕ್ಷದಿಂದ ಓಟ್ ಫ್ಲೋ ಹೇಗಿದೆಯೋ ಅದಕ್ಕಿಂತಲೂ ಹೆಚ್ಚಿನ ಇನ್ಫ್ಲೋ ಇರುತ್ತದೆ ಎಂದರು.
ಕೊಪ್ಪಳ ಜಿಲ್ಲೆಯಿಂದ ಬಿಜೆಪಿಯ ಯಾವ ಮುಖಂಡರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಕೊಪ್ಪಳದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.