ಸುದ್ದಿಮೂಲವಾರ್ತೆ
ಕೊಪ್ಪಳ ಆ 22: ಕಟ್ಟಡ ಕಾಯ್ದ ದುರ್ಬಲಗೊಳಿಸಲಾಗುತ್ತಿದೆ.ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನಸಹಾಯ ಮಾಡಿಲ್ಲ ಈ ಕುರಿತು ಆ 24 ರಂದು ಹೋರಾಟ ಮಾಡಲಾಗುವುದು ಎಂದು ಸಿಐಟಿಯು ಮುಖಂಡ ಕಾಸಿಂ ಸರದಾರ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕಟ್ಟಡ ಕಾರ್ಮಿಕರಿಗೆ 90 ದಿನದ ವೇತನ ಚೀಟಿ ತರಲು ಹೇಳುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಒಂದು ಕಡೆ ಕೆಲಸ ಮಾಡಲು ಆಗುವುದಿಲ್ಲ ಅದಕ್ಕಾಗಿ ಈ ನೀತಿ ಕೈಬಿಡಬೇಕು ಎಂದರು.
ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದನ್ನು ಪ್ರಿಯಾಂಕ ಖರ್ಗೆ ಆರೋಪಿಸಿದ್ದರು. ಆದರೆ ಈಗ ಅವರ ಸರಕಾರ ಬಂದರೂ ತನಿಖೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.
ಬೊಗಸ್ಸು ಕಾರ್ಡು ಹೊಂದಿದವರ ಪತ್ತೆ ಮಾಡಬೇಕು. ಕೆಲವು ಸಂಘಟನೆಯವರು ಬೋಗಸ್ಸು ಕಾರ್ಡ್ ಮಾಡಿಸಿದ್ದಾರೆ. ಅಧಿಕಾರಿಗಳೇ ಒಂದು ಸಂಘ ರಚಿಸಿ ಅವರಿಗೆ ಕಾರ್ಡ್ ನೀಡುತ್ತಿದ್ದಾರೆ ಎಂದು ಅರೋಪಿಸಿದರು
ಈ ಸಂದರ್ಭದಲ್ಲಿ ಹನುಮೇಶ, ಚಾಂದಪಾಷಾ. ಮಹಿಬೂಬ ಇದ್ದರು.