ಅಖಿಲ ಭಾರತ ವೀರಶೈವ ಮಹಾಸಭ
ಸುದ್ದಿಮೂಲ ವಾರ್ತೆ
ಯಾದಗಿರಿ, ಆ. 22 -ಪವಿತ್ರ ಶ್ರಾವಣ ಮಾಸದಲ್ಲಿ ಶಿವಶರಣರ ಚಿಂತನೆಗೆ ಸಮಯ ಮೀಸಲಿಡುವ ಮೂಲಕ ಒಂದು ತಿಂಗಳ ಕಾಲ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ನಗರದ ಬಸವರಾಜ ಶಾಸ್ತ್ರೀಗಳು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಲಾಗಿರುವ ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಚನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರಾವಣ ಮಾಸ ಅತ್ಯಂತ ಪುಣ್ಯದ ಮಾಸವಾಗಿದ್ದು, ಈ ದಿನಗಳಲ್ಲಿ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಶರಣರ ಹಿತ ವಚನಗಳನ್ನು ಆಲಿಸಬೇಕು ಎಂದರು.
ಉಪನ್ಯಾಸ ನೀಡಿದ ವೆಂಕಟೇಶ ಕಲಕಂಭ, ದೇವರ ದಾಸಿಮಯ್ಯನವರು ನಮ್ಮ ಜಿಲ್ಲೆಯವರೇ, ವಚನಕಾರರನ್ನು ಕೊಟ್ಟ ಜಿಲ್ಲೆಯಲ್ಲಿ ಪ್ರವಚನ, ಶರಣರ ಚಿಂತನೆಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ವೀರಶೈವ ಸಮಾಜದ ಮುಖಂಡರಾದ ಅಯ್ಯಣ್ಣ ಹುಂಡೇಕಾರ, ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಮಾಜದ ಪ್ರಮುಖರಾದ ಚನ್ನಪ್ಪ ಠಾಣಗುಂದಿ, ಶರಣು ಇಡ್ಲೂರು, ನೂರಂದಪ್ಪ ಲೇವಡಿ, ನಾಗರಾಜ ಕಂಠಿ,ಡಾ. ಸುಭಾಶ್ಚಂದ್ರ ಕೌಲಗಿ, ಅನ್ನಪೂರ್ಣ ಜವಳಿ, ವಿಜಯಲಕ್ಷ್ಮೀ ಹಿರೇಮಠ, ನಿರ್ಮಲಾ ಸಂಗಾರೆಡ್ಡಿ ಸೇರಿದಂತೆ ಸಮಾಜ ಅನೇಕ ಗಣ್ಯರು ಭಾಗವಹಿಸಿದ್ದರು. ಬಂಡೆಪ್ಪ ಆಕಳ ಸ್ವಾಗತಿಸಿದರು. ಮಹೇಶ ಹಿರೇಮಠ ವಂದಿಸಿದರು.