ಸುದ್ದಿಮೂಲ ವಾರ್ತೆ
ತಿಪಟೂರು,ಆ.22: ತಿಪಟೂರು ತಾಲೂಕಿನ ಕರಡಿ ಬೆಟ್ಟದ ದೇವರಹಳ್ಳಿಯಲ್ಲಿ ಇನ್ನರ್ವ್ಹೀಲ್ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರು ವಿವಿಧ ಜಾತಿಯ ಸಸಿಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಕ್ಲಬ್ನ ಅಧ್ಯಕ್ಷೆ ಸ್ವರ್ಣಗೌರಿ, ಪದಾಧಿಕಾರಿಗಳಾದ ಸುಮನಾ, ಸುವರ್ಣ, ಪ್ರೇಮಾ ನಟರಾಜು, ಶೋಭಾ ಜಯದೇವ್, ರಶ್ಮಿಸ್ವಾಮಿ, ಪಂಕಜ, ಮಂಜುಳಾ, ಸುಮನಾ ತಂಡಗ, ಉಮಾನಾರಾಯಣಗೌಡ ಮತ್ತಿತರರಿದ್ದರು.
ತಾಲೂಕಿನ ಕರಡಿಗುಡ್ಡದಲ್ಲಿ ರಾಮಕೃಷ್ಣ ಮಿಷನ್ ಫಾರೆಸ್ಟ್, ಬೈ ಹಾರ್ಟ್ ಫುಲ್ನೆಸ್ ಸೆಂಟರ್, ನಾಗರೀಕ ಜಾಗೃತಿ ಮತ್ತು ಹಿತರಕ್ಷಣಾ ವೇದಿಕೆ, ಶ್ರೀ ಪತಂಜಲಿ ಯೋಗ ಸಮಿತಿ ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳೊಂದಿಗೆ 2 ಸಾವಿರ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆನಂದ್, ಹಿತರಕ್ಷಣಾ ವೇದಿಕೆ ಅಧ್ಯಕ್ಷ ರೇಣುಕಾರಾಧ್ಯ, ಗಿರಿಯಪ್ಪ, ಆಶ್ರಮದ ಸುಬ್ರಹ್ಮಣ್ಯ, ಪ್ರಕಾಶ್ ಬಾಬು ಮತ್ತಿತರರಿದ್ದರು.