ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 22 : ಮೂರು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿತನ್ನದೇ ಆದ ಸೇವೆ ನೀಡುತ್ತಿರುವ ಜೇನುಗೂಡು ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮುಂದಿನ ದಿನಗಳಲ್ಲೂ ಸಮಾಜಿಕ ಕಾಳಜಿಯ ಮೂಲಕ ಮುನ್ನೆಡಿಯಿರಿ ಎಂದು ಶಾಸಕ ಶರತ್ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ಸೂಲಿಬೆಲೆ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಜೇನುಗೂಡು ಟ್ರಸ್ಟ್ ಗೆ ನೂತನ
ನಿರ್ದೇಶಕರುಗಳಾದ ಬಿ.ಹರೀಶ್ ಹಾಗೂ ಹೆಚ್.ಎಂ.ಮುನಿರಾಜು ಅವರಿಗೆ ಆಧೇಶಪತ್ರ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕೆಲಸ ಮಾಡುತ್ತಿದೆ.
ಗ್ರಾಮೀಣ ಭಾಗದ ಜನತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತಪಾಸಣೆ ಶಿಬಿರಗಳ ಮೂಲಕ ಆರೋಗ್ಯದ ಕಾಳಜಿ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಡ ಮಕ್ಕಳಿಗೆ ಲೇಖನ ಸಾಮಾಗ್ರಿಗಳ ವಿತರಣೆ, ಕ್ರೀಡಾಸಕ್ತರಿಗೆ ಧನ ಸಹಾಯದ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಈ ಟ್ರಸ್ಟ್ ಇತರರಿಗೆ ಮಾರ್ಗದರ್ಶನವಾಗಬೇಕು ಎಂದರು.
ನೂತನ ನಿರ್ದೇಶಕರಾದ ಬಿ.ಹರೀಶ್ ಮಾತನಾಡಿ ಕನ್ನಡ ಶಾಲೆಗಳ ಬಗ್ಗೆ ಹೊಸ ಯೋಜನೆಗಳನ್ನು ರೂಪಿಸಿ ಕನ್ನಡ ಶಾಲೆ ಉಳಿವಿಗಾಗಿ ಜಾಗೃತಿ ಮೂಲಕ ಬಲವರ್ದನೆ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜೇನುಗೂಡು ಟ್ರಸ್ಟ್ ಮಹಾಪೋಷಕರಾದ ಬಿ.ವಿ.ಸತೀಶಗೌಡ, ಟೌನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ, ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಸಂಘಟನಾ ಕಾರ್ಯಧರ್ಶಿ ಎಸ್.ಕೆ.ವಸಂತಕುಮಾರ್, ಸಹಕಾರ ಬ್ಯಾಂಕ್ ನಿರ್ದೇಶಕ ಮುತ್ತು ರಾಜ್, ಜಿ.ಎಂ.ನಾಗೇಶ್ಇತರರು ಇದ್ದರು.