ಸುದ್ದಿಮೂಲವಾರ್ತೆ
ಕೊಪ್ಪಳ,ಆ.24: ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೆ ಏರಿಸುವಂತೆ ಬೆಟಗೇರಿ ಗ್ರಾಮಸ್ಥರು ಜಿಲ್ಲೆಯ ಆರೋಗ್ಯ ಅಧಿಕಾರಿಗಳಾದ ಡಾ. ಲಿಂಗರಾಜ ಮನವಿ ಸಲ್ಲಿಸಿದರು.
ಬೆಟಗೇರಿ ಗ್ರಾಮವು ಸುತ್ತ ಮತ್ತು ಇರುವ ಕಾತರಕಿ, ಬಿಸರಳ್ಳಿ ಬೊಚನಹಳ್ಳಿ, ನೀರಲಗಿ, ತಿಗರಿ, ಮತ್ತೂರು , ಮೋರನಾಳ ಗ್ರಾಮದ ಮಧ್ಯ ಇರುವ ಗ್ರಾಮವಾಗಿದೆ ಇಲ್ಲಿ ಪ್ರತಿನಿತ್ಯ ಒಂದರಿಂದ ಎರಡು ಹೆರಿಗೆ ಆಗುತ್ತಿದ್ದು ಇಲ್ಲಿಯ ಸಾರ್ವಜಕರಿಗೆ ಅನುಕೂಲವಾಗುತ್ತದೆ.
ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂದಾನಸ್ವಾಮಿ ಸಾಲಿಮಠ ಏಳುಕೋಟೇಶ ಕೊಮಲಾಪುರ , ವಿಜಯ ಯತ್ನಳ್ಳಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು