ಆ,25:ಮಾರ್ಗವಾಗಿ ಹಾವಿನಹಾಳು ಗ್ರಾಮಕ್ಕೆ ವಾಪಸಾತಿ ಬಸ್ ಬಿಡುವಂತೆ ಕೋರಿ ಗ್ರಾಮಸ್ಥರಿಂದ ಶಾಸಕರು ಮತ್ತು ಡಿಪೋ ವ್ಯವಸ್ಥಾಪಕರಿಗೆ ಮನವಿ ಶಾಸಕರನ್ನು ಅವರ ನಿವಾಸ ಕಚೇರಿಯಲ್ಲಿ ಭೇಟಿ ಮಾಡಿದ ಗ್ರಾದ ಪಾಲಕ ಪೋಷಕರು ಶಾಸಕರಿಗೆ ಮನವಿ ಸಲ್ಲಿಸಿ ತಮ್ಮ ತೊಂದರೆ ತಿಳಿಸಿದರು.
ಸಿರುಗುಪ್ಪ ನಗರದ ಕ.ಕ.ರಾ.ರ.ಸಾ.ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಸೂಕ್ತ ಬಸ್ ವ್ಯವಸ್ಥೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿ ವಿನಂತಿಸಿದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮುದ್ದಟನೂರು ನವಗ್ರಾಮದಿಂದ ಮುದ್ದಟನೂರು ಸರ್ಕಾರಿ ಶಾಲೆಗಳಿಗೆ 50 ವಿದ್ಯಾರ್ಥಿಗಳು, ಮತ್ತು ಹಾವಿನಹಾಳು ಗ್ರಾಮದಿಂದ ಮುದ್ದಟನೂರು ಶಾಲೆಗಳಿಗೆ 50 ವಿದ್ಯಾರ್ಥಿಗಳು ಪ್ರತಿನಿತ್ಯ ಸುಮಾರು
5 ಕಿ.ಮೀ. ದೂರ ನಡೆದುಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಹೈಸ್ಕೂಲ್ ಮಟ್ಟದ ಹದಿ ಹರೆಯದ ವಿದ್ಯಾರ್ಥಿನಿಯರನ್ನು ನಡೆದುಕೊಂಡು ಹೋಗಲು ಕೆಲ ಪೋಷಕರು ಕಳಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕು ಗೊಳ್ಳುತ್ತಿದೆ.
ಆದ್ದರಿಂದ ನಮಗೆ ಸಿರುಗುಪ್ಪ ಡಿಪೋದಿಂದ ಬೆಳಿಗ್ಗೆ 08 ಗಂಟೆಗೆ ಸಿರಿಗೇರಿ ಮೂಲಕ ತಾಲೂಕಿನ ಮುದ್ದಟನೂರು ಮಾರ್ಗವಾಗಿ ಹಾವಿನಹಾಳು ರಿಟರ್ನ್ ಬಸ್ ಬಿಡುವಂತೆ ಶಾಸಕ ಬಿ ಎಂ ನಾಗರಾಜ ಇವರಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಮನವಿ ಪತ್ರ ಸ್ವೀಕರಿಸಿದ ಶಾಸಕರು ಕೂಡಲೇ ಬಸ್ ಡಿಪೋ ವ್ಯವಸ್ಥಾಪಕರಿಗೆ ಪತ್ರ ಬರೆದು ಈ ಮನವಿ ಮೇರೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಆದೇಶಿಸಿ ಪತ್ರ ಬರೆದು ಕೊಟ್ಟು ಡಿಪೋದವರಿಗೆ ಸೂಕ್ತ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.
ಈ ವೇಳೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪಾಲಕ ಪೋಷಕರಾದ ಮಾರುತಿ, ಬಸವರಾಜ, ಮುತ್ತಮ್ಮ, ಹೆಚ್.ಬಿ. ರಾಧಿಕ, ಹುಲಿಗೆಮ್ಮ, ರಾಮಪ್ಪ, ಪ್ರಭಾವತಿ ಸೇರಿದಂತೆ ಅನೇಕರು ಬಳ್ಳಾರಿ ರಸ್ತೆ ಬಳಿಯ ಬಸ್ ಡಿಪೊ ತೆರಳಿ ವ್ಯವಸ್ಥಾಪಕರನ್ನು ಕಾದಿದ್ದು ಅವರಿಗೆ ಮನವಿ ನೀಡಿದರು.