ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ.26: ಪಟ್ಟಣದ ಹೊರ ವಲಯದಲ್ಲಿರುವ ಪಾರಿವಾಟ ಗುಡ್ಡದಲ್ಲಿರುವ ಆಂಜಿನೇಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಶ್ರಾವಣ ಮಾಸದ ಎರಡನೇ ಶನಿವಾರ ಸಮಿತಿಯ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ, ದೇಗುಲದ ನೀಲಿ ನಕ್ಷೆ ಬಿಡುಗಡೆ ಮಾಡಿದರು.
ಸಮಿತಿಯ ಮುಖಂಡ ಎಲ್ಐಸಿ ಮುನಿರಾಜು ಮಾತನಾಡಿ, ‘ಸತತ 25 ವರ್ಷಗಳ ಹೋರಾಟದ ಫಲವಾಗಿ ಭೂಗಳ್ಳರ ಪಾಲಾಗಿದ್ದ ದೇಗುಲವನ್ನು ಉಳಿಸಿಕೊಂಡಿದ್ದೇವೆ. ಅಪಾರ ಭಕ್ತರನ್ನು ಹೊಂದಿರುವ ಪಾರಿವಾಟ ಗುಡ್ಡ ಆಂಜಿನೇಯ ಸ್ವಾಮಿಯ ಜೀರ್ಣೋದ್ಧಾರ ಮಾಡಲು ಸಮಿತಿ ನಿರ್ಧಾರಿಸಿದ್ದು, ಅಂದಾಜು 1 ಕೋಟಿ ವೆಚ್ಚದಲ್ಲಿ ನೂತನ ದೇಗುಲ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಭಕ್ತಾಧಿಗಳ ಸಹಾಯ ಹಸ್ತ ಇದಕ್ಕೆ ಅಗತ್ಯವಿದ್ದು, ದೇಗುಲ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.
ವರ್ಷಕೊಮ್ಮೆ ಕಡಳೆಕಾಯಿ ಪರಿಷೆ ನಡೆಯುವ ಈ ಜಾಗದಲ್ಲಿ ದೊಡ್ಡ ಜಾತ್ರಾ ಮಹೋತ್ಸವ ನಡೆಯುತ್ತದೆ. ಗುಡ್ಡದ ಮೇಲೆ ನೆಲೆಸಿರುವ ಆಂಜಿನೇಯಸ್ವಾಮಿ ದೇಗುಲವೂ ಬಂಡೆಗಳ ನಡುವೆ ಕೆತ್ತಲಾದ ಮೂರ್ತಿಯನ್ನು ಅನಾದಿ ಕಾಲದಿಂದಲೂ ಸ್ಥಳೀಯರು ಪೂಜಿಸಿಕೊಂಡು ಬರುತ್ತಿದ್ದಾರೆ. ಭಕ್ತಾಧಿಗಳ ಸಂಘಟಿತರಾಗಿ ದೇಗುಲ ಭೂಮಿಯನ್ನು ರಕ್ಷಿಸಿ, ಲಭ್ಯ ಆರ್ಥಿಕ ಸಂಪನ್ಮೂಲದಿಂದ ಮೆಟ್ಟಿಲುಗಳು, ಸುಣ್ಣ ಬಣ್ಣ ಮಾಡಿ ದೇವರ ಪೂಜೆಸುತ್ತಿದ್ದೇವೆ’ ಎಂದರು.
ದೇವನಹಳ್ಳಿಯ ಮಹೇಶ್ ಕುಟುಂಬ ಪ್ರತಿವರ್ಷ ದಂತೆ ಎರಡನೇ ಶನಿವಾರ ಪೂಜೆ ಸಲ್ಲಿಸಿ ಭಕ್ತದಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಇದೇ ವೇಳೆ ದೇವನಹಳ್ಳಿಯ ಮಹೇಶ್, ಆವತಿಯ ಲಿಖಿತ್, ದಾಸರಹಳ್ಳಿ ಶಿವು, ಆಂಜಿನಪ್ಪ ಸೇರಿದಂತೆ ಇತರರು ಸಮಿತಿಯ ಸದಸ್ಯರು ಇದ್ದರು.