ಸುದ್ದಿಮೂಲ ವಾರ್ತೆ
ಕೊಪ್ಪಳ,ಆ.28: ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
ಕೊಪ್ಪಳ ಜೆಸ್ಕಾಂ ಹಾಗು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ರಾಜ್ಯ ಸರಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ರೈತರಿಗೆ ಈಗ ನೀಡುತ್ತಿರುವ ಅಘೋಷಿತ ಲೋಡ್ ಶೆಡ್ಡಿಂಗ್ ಕೈ ಬಿಡಬೇಕು.ರೈತರಿಗೆ ನಿರಂತರ ಗುಣಮಟ್ಟದ ವಿದ್ಯುತ್ ನೀಡಬೇಕು.ತುಂಗಭದ್ರಾ ಜಲಾಶಯದ ಪಕ್ಕದ ಜಮೀನುಗಳಿಗೆ ನಿರೊದಗಿಸಬೇಕೆಂದು ಆಗ್ರಹಿಸಿದರು.
ತೀವ್ರ ಮಳೆ ಕೊರತೆ ಅನುಭವಿಸುತ್ತಿರುವ ಜಿಲ್ಲೆಯ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ ಇದರಿಂದ ರೈತರು ಕಂಗಾಲಾಗಿದ್ದರೆ ಸರಕಾರ ರೈತರಿಗೆ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮಸೇನ ಕಲಕೇರಿ. ಮದ್ದಾನಸ್ವಾಮಿ ಹಿರೇಮಠ, ಕರಿಯಪ್ಪ.ಸಂಜೀವಪ್ಪ.ನಾಗರಾಜ. ಮಹಾಂತೇಶ ಸೇರಿ ಹಲವರು ಇದ್ದರು.