ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 28 : ದೇವರ ದರ್ಶನ ಪಡೆಯುವುದರಿಂದ ಮನಸ್ಸು ಶುದ್ಧವಾಗುತ್ತದೆ. ಮನುಷ್ಯನಲ್ಲಿ
ಮಾನವೀಯ ಸದ್ಗುಣಗಳನ್ನು ಬೆಳೆಸುವಲ್ಲಿ ದೇವಾಲಯಗಳ ಪಾತ್ರ ಬಹುಮುಖ್ಯ ಎಂದು ಶ್ರೀಕಾಟೇರಮ್ಮ ದೇವಸ್ಥಾನದ ಸಂಸ್ಥಾಪಕರಾದ ಚಂದ್ರಪ್ಪ ಹೇಳಿದರು.
ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದಲ್ಲಿ ನಡೆದ ಶ್ರೀಕಾಟೇರಮ್ಮ ದೇವಾಲಯ ಜೀರ್ಣೋದ್ದಾರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮನುಷ್ಯನ ಮನಸ್ಸು ಯಾವಾಗಲೂ ಸ್ವಾರ್ಥ ಬಯಸುತ್ತದೆ. ಸಮಸ್ಯೆಯಾದರೆ ಶಾಂತಿ ನೆಮ್ಮದಿಗಾಗಿ ದೇವರ ಮೊರೆ ಹೋಗುತ್ತಾರೆ. ದೇವಾಲಯಗಳಲ್ಲಿ ಶಾಂತಿಯ ವಾತಾವರಣ ನಿರ್ಮಿಸಬೇಕು. ಎಲ್ಲರ ಹಿತಕ್ಕಾಗಿ ಪ್ರೀತಿ ವಿಶ್ವಾಸ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಉದ್ಯಮಿ ಕಿರಣ್ಕುಮಾರ್ ಮಾತನಾಡಿ, ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಬಳುವಳಿಗಳಲ್ಲಿ ಒಂದಾಗಿದೆ. ದೇವಾಲಯಗಳಲ್ಲಿ ಕಾಲ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ದೇವಾಲಯಗಳ ನಿರ್ವಹಣೆ ಮತ್ತು ಅಭಿವೃದ್ದಿ ಗುರುತರವಾದ ಕೆಲಸವನ್ನು ದಾನಿಗಳು ಹಾಗೂ ಗ್ರಾಮಸ್ಥರು ಇದರ ಹೊಣೆಯನ್ನು ಹೊರಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೃಷ್ಣಪ್ಪ, ರಮೇಶ್, ನಾಗಣ್ಣ, ಶಂಕರಪ್ಪ, ಕ್ಯಾತಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.