ಸುದ್ದಿಮೂಲವಾರ್ತೆ
ಹೊಸಕೋಟೆ, ಆ. 31 : ತಾಲೂಕಿನ ನಂದಗುಡಿ ಹೋಬಳಿಯ ಕರಪನಹಳ್ಳಿ ಎಂ.ಹೊಸಹಳ್ಳಿ ಎಂಪಿಸಿಎಸ್ನ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಕಾಂಗ್ರೆಸ್
ಬೆಂಬಲಿತ ನೂತನ ಅಧ್ಯಕ್ಷರಾಗಿ ಮುನೇಗೌಡ ಹಾಗೂ ಉಪಾಧ್ಯಕ್ಷರಾಗಿ ಕೆ.ಎಂ. ನಾರಾಯಣಪ್ಪ ಅವಿರೋಧ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ನಾಗಭೂಷಣ್ ತಿಳಿಸಿದರು.
ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಮುನೇಗೌಡ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಸಂಘವನ್ನು ಆರ್ಥಿಕವಾಗಿ ಬಲಿಷ್ಟಗೊಳಿಸಿ ಪ್ರಗತಿಯ ಹಾದಿಯಲ್ಲಿ ಮುನ್ನೆಡೆಸುತ್ತೇನೆ. ಸರ್ಕಾರ ಹಾಗೂ ಬಮೂಲ್ ವತಿಯಿಂದ ಸಿಗುವಂತಹ ಎಲ್ಲಾ ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸಲು ಕಾಳಜಿವಹಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಾಲೂಕು ಶಾಸಕ ಶರತ್ ಬಚ್ಚೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಗ್ರಾಪಂನ ಮಾಜಿ ಅಧ್ಯಕ್ಷ ಎಸ್.ಎಂ. ರವಿ, ಮಾಜಿ ಉಪಾಧ್ಯಕ್ಷ ಮಂಜುನಾಥ್, ಮಾಜಿ ಸದಸ್ಯ ಜಿ. ಶಂಕರಪ್ಪ ನೂತನ ನಿರ್ದೇಶಕರಾದ ಪಿ ನಾರಾಯಣಪ್ಪ, ಕೆ.ವಿ. ರಾಧೇಶ್, ಬೇರಿಕಪ್ಪ, ಪಿಳ್ಳವೆಂಕಟರಮಣಪ್ಪ,
ರವಿಕುಮಾರ್, ತುಳಸಮ್ಮ, ನಾಗಮಣಿ, ಆಂಜಿನಪ್ಪ, ಚನ್ನಪ್ಪ, ಮುನಿಯಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕರಪನಹಳ್ಳಿ-ಎಂ.ಹೊಸಹಳ್ಳಿ ಗ್ರಾಮಸ್ಥರು ಇದ್ದರು.