ಸುದ್ದಿಮೂಲ ವಾರ್ತೆ
ಮೈಸೂರು,ಸೆ.2:ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮೈಸೂರು ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಹಾಲಿ ನಿರ್ದೇಶಕ ಕೆ ಉಮಾಶಂಕರ್,,ಮಹೇಶ್, ನಿರ್ದೇಶಕರಾದ ಗುರುಸ್ವಾಮಿ, ಸದಾನಂದ,ನೀಲನಾಗರಾಜು ಹಾಗೂ ವಿಸ್ತರಣಾಧಿಕಾರಿ ಸಂತೋಷ್, ಬಿಎಂಸಿ ವ್ಯವಸ್ಥಾಪಕ ಸಂತೋಷ್,ಸಂಘದ ಅಧ್ಯಕ್ಷರು,ಗ್ರಾಮದ ಮುಖಂಡರಾದ ಕುಮಾರ್,ರಾಜಶೇಖರ ಮೂರ್ತಿ, ದೇವಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.